ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಅಂಗನವಾಡಿ ಕೇಂದ್ರಗಳಿಗೆ LED TV ವಿತರಣಾ ಕಾರ್ಯಕ್ರಮ
 ಶಿಕಾರಿಪುರ ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಕೇಂದ್ರ ಪುರಸ್ಕೃತ ಸಕ್ಷಮ ಯೋಜನೆಯಡಿ ಮಂಜೂರಾದ LED TVಯನ್ನು ಬಿ.ಜೆ.ಪಿ.ರಾಜ್ಯಾಧ್ಯಕ್ಷ  ಬಿ.ವೈ.ವಿಜಯೇಂದ್ರ ವಿತರಿಸಿದರು. ಇದನ್ನೂ ಓದಿ : ಶಬರಿಮಲೆ ಬೆಟ್ಟ ಇಳಿಯುವಾಗ ಹೃದಯಾಘಾತ – 18 ವರ್ಷದ ಅಯ್ಯಪ್ಪ ಭಕ್ತ ಸಾವು
ಬಳಿಕ ಮಾತನಾಡಿ ಕೇಂದ್ರ ಪುರಸ್ಕೃತ ಸಕ್ಷಮ ಅಂಗನವಾಡಿ ಯೋಜನೆ ಅಡಿಯಲ್ಲಿ LED TV, ಶುದ್ಧ ಕುಡಿಯುವ ನೀರಿನ ಘಟಕ, ಮಳೆನೀರು ಕೊಯ್ಲು, ನ್ಯೂಟ್ರಿ ಗಾರ್ಡನ್ ಸೇರಿದಂತೆ ಮೂಲಸೌಕರ್ಯ ಕಲ್ಪಿಸುವ ಮಹತ್ವದ ಯೋಜನೆಯ ಮೊದಲನೇ ಹಂತವಾಗಿ ಶಿಕಾರಿಪುರದ ಒಟ್ಟು 313 ಅಂಗನವಾಡಿ ಕೇಂದ್ರಗಳ ಪೈಕಿ 149 ಅಂಗನವಾಡಿ ಕೇಂದ್ರಗಳಿಗೆ LED TV ವಿತರಣೆ ಯಾಗಿದೆ, ಉಳಿತ ಕೇಂದ್ರಗಳಿಗೆ ಸದ್ಯದಲ್ಲೇ ಸರಬರಾಜು ಮಾಡಲಾಗುವುದು. ಈಗಾಗಲೇ ಖಾಲಿ ಇದ್ದು 8 ಅಂಗನವಾಡಿ ಕಾರ್ಯಕರ್ತೆಯರ ಹುದ್ದೆ ಹಾಗೂ 51 ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದರು.
ಮಾಜಿ ಮುಖ್ಯ ಮಂತ್ರಿ ಬಿ.ವೈ.ಯಡಿಯೂರಪ್ಪ ಅವರ ಕನಸಿ ‘ಭಾಗ್ಯಲಕ್ಷ್ಮಿ ಯೋಜನೆಯಡಿ’ ಶಿವಮೊಗ್ಗ ಜಿಲ್ಲೆಯಲ್ಲಿ 89549 ಬಾಂಡ್ ವಿತರಿಸಲಾಗಿದ್ದು, ಶಿಕಾರಿಪುರ ತಾಲ್ಲೂಕಿನಲ್ಲಿ ಸೌಲಭ್ಯ ಪಡೆದು ಮೆಚ್ಯೂರಿಟಿ ಹೊಂದಿದ 1483 ಫಲಾನುಭವಿಗಳಿಗೆ ಹಣ ಪಾವತಿಯಾಗಿದ್ದು ಉಳಿದೆಲ್ಲ ಮೆಚ್ಯೂರಿಟಿ ಹೊಂದಿರುವ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಬಾಂಡ್ ಹಣ ತಲುಪಿಸಲು ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
 ಎಲ್ಲಾ ಅಂಗನವಾಡಿ ಕೇಂದ್ರಗಳು ರಾಜ್ಯದಲ್ಲಿಯೇ ಮಾದರಿ ಕೇಂದ್ರಗಳಾಗಿ ಕಾರ್ಯನಿರ್ವಹಿಸಲು ಎಲ್ಲರೂ ಶಕ್ತಿ ಮೀರಿ ಶ್ರಮಿಸಬೇಕೆಂಬ ಕರೆ ನೀಡಿದರು.  ‘ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ ಯೋಜನೆ’ಯ 4564 ಫಲಾನುಭವಿಗಳಿಗೆ ಮಂಜೂರಾತಿ ನೀಡಿದ್ದು ಇದರಲ್ಲಿ 3987 ಫಲಾನುಭವಿಗಳಿಗೆ ಪಾಸ್ ಪುಸ್ತಕ ವಿತರಿಸಲಾಗಿದ್ದು ಉಳಿದ ಎಲ್ಲಾ ಫಲಾನುಭವಿಗಳಿಗೂ ಪಾಸ್ ಪುಸ್ತಕ ವಿತರಿಸುವಂತೆ ಸೂಚನೆ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತರು ಉಪಸ್ಥಿತರಿದ್ದರು.