ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್( ರಿ) ಬಂಟ್ವಾಳ ತಾಲೂಕು ತುಂಬೆ ವಲಯ ಕಳ್ಳಿಗೆ ಕಾರ್ಯಕ್ಷೇತ್ರದ ಚಂದ್ರಿ ಗೆ ಇಲ್ಲಿಯ ನಂದಾದೀಪ ಸ್ವ-ಸಹಾಯ ಸಂಘದ ಸದಸ್ಯರಾದ ಶ್ರೀಮತಿ ಪದ್ಮಾವತಿಯವರ ತಾಯಿಯಾದ ಶ್ರೀಮತಿ ಕಮಲ ಇವರಿಗೆ ಅನಾರೋಗ್ಯದ ನಿಮಿತ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಉಚಿತವಾಗಿ ವಾಟರ್ ಬೆಡ್ ವಿತರಿಸಲಾಯಿತು. ಇದನ್ನೂ ಓದಿ : ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಆಯೋಜಿಸಿದ್ದ ಐತಿಹಾಸಿಕ ಹಂಪಿ ಉತ್ಸವ – 2026 ಅನ್ನು ಉದ್ಘಾಟಿಸಿದ ಸಿ.ಎಂ.
ಈ ಸಂದರ್ಭ ತುಂಬೆ ವಲಯದ ಮೇಲ್ವಿಚಾರಕಿ ಮಮತಾ, ಸೇವಾ ಪ್ರತಿನಿಧಿ ಪ್ರೀತಿ, ಒಕ್ಕೂಟದ ಪದಾಧಿಕಾರಿಗಳಾದ ಶ್ರೀಮತಿ ಪ್ರಮೀಳಾ, ಶ್ರೀಯುತ ತಾರಾನಾಥ, ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
