ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜು.ರಂದು ಸುರಿದ ಧಾರಾಕಾರ ಮಳೆಗೆ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಕಡವಿನ ಬಾಗಿಲು ಬಳಿ 13 ಮನೆಯ ಒಳಗಡೆ ನೀರು ಬಂದಿದ್ದು, ಈ ಮನೆಯ ಸದಸ್ಯರನ್ನು ಬೇರೆ ಕಡೆಗೆ ಸ್ಥಳತರಿಸಲಾಗಿತು.

ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಮಂಜೂರು ಮಾಡಿದ ದಿನಸಿ ಸಾಮಗ್ರಿ ಮತ್ತು ಮನೆ ಸ್ವಚ್ಛಗೊಳಿಸುವ ವಸ್ತುಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾನಿರ್ದೇಶಕರಾದ ಮಹಾಬಲ ಕುಲಾಲ್ ಮತ್ತು ಬಂಟ್ವಾಳ ತಾಲೂಕು ಯೋಜನಾಧಿಕಾರಿಗಳಾದ ಬಾಲಕೃಷ್ಣ ಅವರು ವಿತರಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ವಸಂತ ಪದ್ಮನಾಭ ಗೌಡ, ಶೌರ್ಯ ತಂಡದ ಸದಸ್ಯರಾದ ಶಶಿಧರ್, ಮೇಲ್ವಿಚಾರಕಿ ರೂಪ ಜೆ ರೈ, ಸೇವಾ ಪ್ರತಿನಿಧಿಗಳಾದ ವಿಜಯ, ಸುನಿತಾ, ಸಂಪ, ರೋಹಿಣಿ, ಪ್ರಪುಲ್ಲ ಉಪಸ್ಥಿತರಿದ್ದರು.