ಬಂಟ್ವಾಳ: ಲಯನ್ಸ್‌ ಕ್ಲಬ್‌ ಅಮ್ಟೂರು ಇದರ ವತಿಯಿಂದ ಬೋಳಂತೂರು ಕನ್ನಡ ಮಾಧ್ಯಮ ಶಾಲೆಗೆ 80 ಕುರ್ಚಿ ಹಾಗೂ 20 ಟೇಬಲ್‌ಗಳನ್ನು ಹಾಗೂ ಬೊಳ್ಳಾಯಿ ಅಂಗನವಾಡಿ ಶಾಲೆಗೆ 15 ಕುರ್ಚಿಗಳ ವಿತರಣೆ ಮಾಡಲಾಯಿತು.

ಬೋಳಂತೂರು ಕನ್ನಡ ಮಾಧ್ಯಮ ಶಾಲೆಗೆ 80 ಕುರ್ಚಿ ಹಾಗೂ 20 ಟೇಬಲ್‌ಗಳನ್ನು ಹಾಗೂ ಬೊಳ್ಳಾಯಿ ಅಂಗನವಾಡಿ ಶಾಲೆಗೆ 15 ಕುರ್ಚಿಗಳ ವಿತರಣೆ ಮಾಡಲಾಯಿತು

ಅಮ್ಟೂರು ಲಯನ್ಸ್‌ ಕ್ಲಬ್‌ ತನ್ನ ಎರಡನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭ ಸೇವಾ ಚಟುವಟಿಕೆಯಾಗಿ ಸಣ್ಣ ಮಕ್ಕಳಿಗೆ ಶಾಲೆಗೆ ಕುರ್ಚಿ ಬೆಂಚುಗಳನ್ನು ನೀಡುವುದಾಗಿ ತೀರ್ಮಾನಿಸಿ ಲಯನ್‌ ಎಡ್ವಿನ್‌ ನೊರೊನ್ಹಾ ಅವರ ಅಧ್ಯಕ್ಷತೆಯಲ್ಲಿ ಜು.27ರಂದು ಈ ಕಾರ್ಯಕ್ರಮವನ್ನು ಸುಸೂತ್ರವಾಗಿ ನೆರವೇರಿಸಿದರು.

ಬಳಿಕ ಅಧ್ಯಕ್ಷರಾದ ಎಡ್ವಿನ್‌ ಮಾತನಾಡಿ ಮಕ್ಕಳು ನೆಲದಲ್ಲಿ ಕುಳಿತುಕೊಳ್ಳುವ ಬದಲು ಕುರ್ಚಿಯಲ್ಲಿ ಕುಳಿತರೆ ಒಳ್ಳೆಯದು ಎನ್ನುವ ದೃಷ್ಠಿಯಿಂದ ಹಾಗೂ ಒಳ್ಳೆಯ ಆರೋಗ್ಯಕ್ಕೋಸ್ಕರ ಹಾಗೂ ಮಕ್ಕಳ ಭವಿಷ್ಯದ ಸಲುವಾಗಿ ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇಂಥ ಸೇವೆಗಳನ್ನು ಈ ಮಕ್ಕಳು ಮಾಡಿ ದೇಶಕ್ಕೆ ಒಳ್ಳೆಯ ಪ್ರಜೆಗಳಾಗಳಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಈ ಕಾರ್ಯಕ್ರಮಕ್ಕೆ ಸಹಕರಿಸಿದ ರಿಚ್ಚಾರ್ಡ್‌ ಡಿʼಸೋಜ ಅವರನ್ನು ಸಮ್ಮಾನಿಸಲಾಯಿತು.

ಅಮ್ಟೂರು ಲಯನ್ಸ್‌ ಕ್ಲಬ್‌ ಕಾರ್ಯದರ್ಶಿ ಜೆಮ್ಸ್‌ ಮಾರ್ಟಿಸ್‌, ನೊಯಲ್‌ ಡಿʼಸೋಜ, ಶಾಲಾ ಶಿಕ್ಷಕಿ ಗೀತಾ ಎಸ್.‌ ಹಾಗೂ ಲಯನ್ಸ್‌ ಕ್ಲಬ್‌ ಅಮ್ಟೂರು ಇದರ ಸದಸ್ಯರು ಉಪಸ್ಥಿತರಿದ್ದರು.