ಪುತ್ತೂರಿನ ದರ್ಬೆಯಲ್ಲಿ ಹಿಂಜಾವೇ ಹಾಗೂ ಪರಿವಾರ ಸಂಘಟನೆಗಳ ನೇತ್ರತ್ವದಲ್ಲಿ ಆಟೋ ರಿಕ್ಷಾಗಳಿಗೆ ಶ್ರೀ ಸಂಜೀವ ಮಟಂದೂರು ರವರ ಉಪಸ್ಥಿತಿಯಲ್ಲಿ ಭಗವಾಧ್ವಜವನ್ನು ಸಂಸದ ನಳಿನ್‌ ಕುಮಾರ್‌ ಕಟೀಲ್ ವಿತರಿಸಿದರು.

ನಂತರ ಎಲ್ಲಾ ವ್ಯಾಪಾರಸ್ಥರಿಗೆ 22ರಂದು ಮಧ್ಯಾಹ್ನ ಅಯೋಧ್ಯ ರಾಮಲಲ್ಲಾ ಪ್ರತಿಷ್ಠೆ ಸಂದರ್ಭದಲ್ಲಿ ಸ್ಥಳೀಯ ಧಾರ್ಮಿಕ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ವಿನಂತಿ ಮಾಡಲಾಯಿತು.