ರಾಯಚೂರು: ಗುರು ರಾಘವೇಂದ್ರ ಸ್ವಾಮಿ ಮಠದ ಶಿಲಾಮಂಟಪಕ್ಕೆ ಮಂತ್ರಾಲಯ ಭಕ್ತರು, ಸುವರ್ಣ ಕವಚ ಕೊಡುಗೆ ನೀಡಿದ್ದಾರೆ.

ಬಹುಕೋಟಿ ಮೌಲ್ಯದ ಸುವರ್ಣ ಶಿಲಾಮಂಟಪ ಮೆಗಾ ಪ್ರಾಜೆಕ್ಟ್‌ಗೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ಚಾಲನೆ ನೀಡಿದರು. ರಾಯರ ವೃಂದಾವನ ಹೊರಭಾಗದಲ್ಲಿ ಇರುವ ಶಿಲಾಮಂಟಪಕ್ಕೆ ಸುವರ್ಣ ಕವಚ ಸಿದ್ಧಪಡಿಸಲಾಗುತ್ತಿದೆ.

ಸುವರ್ಣ ಲೇಪಿತ ಗೋಪುರ ಬಳಿಕ‌ ಈಗ ಸುವರ್ಣ ಶಿಲಾಮಂಟಪ ಕೊಡುಗೆ ನೀಡಲಾಗಿದೆ. ಭಾಗಶಃ ಪೂರ್ಣಗೊಂಡ ಸುವರ್ಣ ಕವಚಗಳಿಗೆ ಶ್ರೀಗಳು ವಿಶೇಷ ಪೂಜೆ ನೆರವೇರಿಸಿದರು. ರಾಯರ ವೃಂದಾವನದ ಮುಂದೆಯಿಟ್ಟು ಕವಚಗಳಿಗೆ ಪೂಜೆ ಮಾಡಿದರು.