ಬಂಟ್ವಾಳ: ಬೈಕ್ ಅಪಘಾತದಿಂದ 2024 ಫೆ.14ರಂದು ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ನರಿಕೊಂಬು ಗ್ರಾಮ ಅಂತರ ನಿವಾಸಿ ದರ್ಣಪ್ಪ ಕುಲಾಲ್ (74) ಜೂ. 30ರಂದು ಸ್ವಗ್ರಹದಲ್ಲಿ ನಿಧನರಾಗಿದ್ದಾರೆ.
ಆರೋಗ್ಯದಲ್ಲಿ ಯಾವುದೇ ಸುಧಾರಣೆ ಇಲ್ಲದ ಕಾರಣ ತಿಂಗಳ ಹಿಂದೆ ಆಸ್ಪತ್ರೆಯಿಂದ ಅವರನ್ನು ಡಿಸ್ಚಾರ್ಜ್ ಮಾಡಲಾಗಿತ್ತು. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗ್ಗೆ ನಿಧನ ಹೊಂದಿದರು.
ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ. ಮೃತರು ಭಜನಾ ಸಂಕೀರ್ತನೆಕಾರರು., ನರಿಕೊಂಬು ಅಂತರ ಶ್ರೀ ಕೋದಂಡರಾಮ ಭಜನಾ ಮಂದಿರ (ರಿ) ರಾಮನಗರ ಇದರ ಸಂಸ್ಥಾಪಕರು. ಅಂತರ ನಾಲ್ಕೈತ್ತಾಯ ಪಂಜುರ್ಲಿ ದೈವಸ್ಥಾನದ ನಿತ್ಯ ಚಾಕರಿದಾರರು, ಪ್ರಗತಿಪರ ಕೃಷಿಕರು ಆಗಿದ್ದರು.
ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.