ಬೆಂಗಳೂರು: ಕ್ಯಾನ್ಸರ್ ರೋಗಿಗಳಿಗೆ ಆರೋಗ್ಯ ಇಲಾಖೆ ಗುಡ್ ನ್ಯೂಸ್ ಕೊಟ್ಟಿದೆ. ರಾಜ್ಯದ 16 ಜಿಲ್ಲೆಗಳಲ್ಲಿ ಕೀಮೋಥೆರಪಿ  ಕೇಂದ್ರಗಳನ್ನು ಓಪನ್ ಮಾಡಲಾಗುವುದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ವಿಕಾಸ ಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ರೋಗ ಹೆಚ್ಚಿನ ಸಂಖ್ಯೆಯಲ್ಲಿ ಆಗ್ತಾ ಇದೆ. ಹೀಗಾಗಿ, ರಾಜ್ಯದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಓಪನ್ ಆಗಲಿವೆ. ಪ್ರತಿ ವರ್ಷ 70 ಸಾವಿರ ಕ್ಯಾನ್ಸರ್ ಖಾಯಿಲೆ ಕಾಣಿಸಿಕೊಳ್ಳುತ್ತಾ ಇದೆ. ಅವರು ಬೆಂಗಳೂರಿಗೆ ಬರಬೇಕು. ಬಡವರು ಕಿದ್ವಾಯಿಯಂತಹ ಸಂಸ್ಥೆಗಳಿಗೆ ಬರಬೇಕು. ಹಾಗಾಗಿ ಬಡವರಿಗೆ ಅನುಕೂಲ ಆಗಲಿ ಅಂತಾ ಓಪನ್ ಮಾಡ್ತಾ ಇದ್ದೇವೆ. ರೋಗಿಗಳು ಹೆಚ್ಚಾಗ್ತಾ ಇದ್ದಾರೆ. ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಿದೆ. ಕೀಮೋ ಥೆರಪಿಗಾಗಿ 60% ರೋಗಿಗಳು 100 ಕಿಮೀ ಪ್ರಯಾಣ ಮಾಡಬೇಕು. ಸಮಯ ಮತ್ತು ತೊಂದರೆ, ಖರ್ಚು ಹೆಚ್ಚಾಗ್ತಾ ಇದೆ. ಆದ್ದರಿಂದ ಜಿಲ್ಲಾ ಆಸ್ಪತ್ರೆಗಳಲ್ಲಿ ಕೀಮೋಥೆರಪಿ ಓಪನ್ ಮಾಡ್ತಾ ಇದ್ದೇವೆ ಎಂದು ಹೇಳಿದ್ದಾರೆ.

ಕಳೆದ ಆಯವ್ಯಯ ಬಜೆಟ್‌ನಲ್ಲಿ ಕೀಮೋ ಥೆರಪಿ ಸ್ಥಾಪನೆ ಮಾಡೋದಾಗಿ ಘೋಷಣೆ ಮಾಡಿದ್ವಿ. ನಾಳೆ 16 ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕಿಮೋಥೆರಪಿ ಪ್ರಾರಂಭಿಸುತ್ತಿದ್ದೇವೆ. ಮುಖ್ಯಮಂತ್ರಿಗಳೇ ಮೈಸೂರಿನಲ್ಲಿ ಉದ್ಘಾಟನೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕ್ಯಾನ್ಸರ್ ಪತ್ತೆಯಾಗಿದೆ ಅನ್ನುವವರು ಕೀಮೋ ಥೆರಪಿ ಪಡೆಯಬಹುದು. ಎಲ್ಲಾ ರೀತಿಯ ತರಬೇತಿ ಮಾಡಲಾಗಿದೆ. ಮೆಡಿಕಲ್ ಅಂಕಾಲಜಿಸ್ಟ್ ಮಾಡಿದ್ದೇವೆ. ನರ್ಸ್ಗಳಿಗೆ ತರಬೇತಿ ನೀಡುತ್ತಿದ್ದೇವೆ. ಪ್ರತಿ ಆಸ್ಪತ್ರೆಯಲ್ಲಿ 10 ಬೆಡ್ ಮೀಸಲಿಡಲಾಗಿದೆ. ಇಬ್ಬರು ನರ್ಸ್‌ಗಳು ಇರ್ತಾರೆ. ಉಚಿತ ಚಿಕಿತ್ಸೆಗೆ ತುಂಬಾ ಅನುಕೂಲ ಆಗಲಿದೆ. ಬಿಪಿಎಲ್ ಕುಟುಂಗಳಿಗೆ ಉಚಿತವಾಗಿ ಆಗಲಿದೆ ಎಂದು ತಿಳಿಸಿದ್ದಾರೆ.