ಬಂಟ್ವಾಳ: ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನರಿಕೊಂಬು ಇಲ್ಲಿ ಶಾಲಾ ವಾರ್ಷಿಕೋತ್ಸವ ಜನವರಿ 3 ಶನಿವಾರದಂದು ಜರಗಿತು.

ಅಕ್ಷರ ಸಂತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಮೊಗರ್ನಾಡ್ ಲಕ್ಷ್ಮೀನರಸಿಂಹ ದೇವಸ್ಥಾನದ ವಠಾರದಿಂದ ಶಾಲೆಯ ತನಕ ತೆರೆದ ವಾಹನದಲ್ಲಿ ಚೆಂಡೆ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಕರೆತಂದು ಶಾಲಾ ವಾರ್ಷಿಕೋತ್ಸವದ ಕಾರ್ಯಕ್ರಮದ ಧ್ವಜಾರೋಹಣವನ್ನು ಹಾಜಬ್ಬ ವರಿಂದ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಪರವಾಗಿ ಹರೇಕಳ ಹಾಜಬ್ಬರವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರ ಸಮನ್ವಯಾಧಿಕಾರಿ ವಿದ್ಯಾಕುಮಾರಿ, ಹಾಗೂ ಐ ಆರ್ ಟಿ ಸುರೇಖಾ ಇಲಾಖೆ ಪರವಾಗಿ ಶುಭ ಹಾರೈಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಮಮತ ಸಂತೋಷ್ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಶಾಲೆಗೆ ನೀಡಿದ ಅನುದಾನದ ಬಗ್ಗೆ ಮಾಹಿತಿ ಹಂಚಿಕೊಂಡರು.

ಉದ್ಘಾಟನಾ ಸಭಾ ಕಾರ್ಯಕ್ರಮದ ನಂತರ ತಾಲೂಕು ಪಂಚಾಯತಿನ ಮೂರು ಲಕ್ಷ ಅನುದಾನದಿಂದ ನಿರ್ಮಾಣವಾದ ವಿಶೇಷ ಚೇತನ ಮಕ್ಕಳ ಶೌಚಾಲಯವನ್ನು ಉದ್ಘಾಟಿಸಲಾಯಿತು.

ಈ ಸಂದರ್ಭದ ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ಮೋಹಿನಿ ವಾಮನ ಕುಲಾಲ್ ನಾಟಿ, ಪಂಚಾಯತ್ ಸದಸ್ಯರುಗಳಾದ ಪ್ರಕಾಶ್ ಮಡಿಮುಗೇರ್, ಸುರೇಖಾ, ಪದ್ಮಶ್ರೀ ಎಲೆಕ್ಟ್ರಿಕಲ್ಸ್ ಮಾಲಕ ಪದ್ಮನಾಭ ಮಯ್ಯ, ಶ್ರೀ ಕೋದಂಡರಾಮ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಕೃಷ್ಣಪ್ಪ ನಾಟಿ, ಶ್ರೀ , ಹರೀಶ್ ಕೇದ್ದೆಲ್, ಉದಯ್ ಕುಮಾರ್ ಶೆಟ್ಟಿ ಹೊಸಲಚ್ಚಿಲ್ ಉಪಸ್ಥಿತರಿದ್ದರು.

ಕೃಷ್ಣಪ್ಪ ಬಂಬಿಲ ಸವಣೂರು ರವರ ನಿರ್ದೇಶನದಲ್ಲಿ ಪ್ರದರ್ಶನಗೊಂಡ ಮಕ್ಕಳ ಕಿರು ನಾಟಕ “ಬಂಗಾರದ ಮೀನು” ಪ್ರೇಕ್ಷಕರ ಗಮನಸೆಳೆಯಿತು.

ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷ ವಹಿಸಿದ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಮಾತನಾಡಿ ಪ್ರಾಥಮಿಕ ಹಂತದ ಶಿಕ್ಷಣ ತುಂಬಾ ಕಠಿಣಕರವಾದ ಕೆಲಸವಾಗಿರುತ್ತದೆ.ಈ ಹಂತದಲ್ಲಿ ಶಿಕ್ಷಕರ ಜವಾಬ್ದಾರಿಯು ಅತಿ ಹೆಚ್ಚಿನದು ಶಿಲ್ಪಿಗಳು ಮೂರ್ತಿ ಕೆತ್ತನೆ ಮಾಡುವಂತೆ ವಿದ್ಯಾರ್ಥಿಗಳನ್ನು ಶಿಕ್ಷಕರು ಉತ್ತಮ ಗುಣಗಳಿಂದ ಕೂಡಿರುವ ಪ್ರಜೆಗಳನ್ನಾಗಿ ರೂಪಿಸುತ್ತಾರೆ ಎಂದರು.

ರೋಟರಿ ಕ್ಲಬ್ ಮಾಜಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಮಾತನಾಡಿ ವಿದ್ಯಾರ್ಥಿಗಳ ಕಲಿಕೆಯಲ್ಲಿ ಶಿಕ್ಷಕರಷ್ಟೇ ಅಲ್ಲದೆ ಪೋಷಕರೂ ಜವಾಬ್ದಾರಾಗಿರುತ್ತಾರೆ. ಬೇರೆಯವರ ಕಷ್ಟಗಳಿಗೆ ನೆರವಾಗುವ ಮತ್ತು ಇತರರ ದುಃಖಗಳನ್ನು ಪರಿಗಣಿಸುವ ಮೌಲ್ಯದೊಂದಿಗೆ ಹೃದಯ ಸೌಂದರ್ಯ ಇದ್ದ ಜೀವನ ಎಲ್ಲರೂ ನಡೆಸಬೇಕುಎಂದರು.

ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕೃತ ವೀರಕಂಬ ಮಜಿ ಶಾಲಾ ಶಿಕ್ಷಕಿ ಸಂಗೀತ ಶರ್ಮ ಮಾತನಾಡಿ ಕಳೆದ ವರ್ಷದ ವಾರ್ಷಿಕೋತ್ಸವದ ಸಂದರ್ಭದಲ್ಲಿ ನೀಡಿದ ಮಾತಿಗೆ ತಪ್ಪದೆ ಯಾವುದೇ ಸರಕಾರಿ ಅನುದಾನ ಕಾಯದೆ ನೂತನ ಕಟ್ಟಡ ನಿರ್ಮಿಸಲು ಕಾರ್ಯ ಪ್ರವೃತ್ತರಾದ ರವಿ ಅಂಚನ್ ನೇತೃತ್ವದ ಶಾಲಾಭಿವೃದ್ಧಿ ತಂಡದ ಕಾರ್ಯಾ ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಸದಸ್ಯ ವಿನೀತಾ ಪುರುಷೋತ್ತಮ, ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿಯಮಿತ ಶಂಭೂರು ಅಧ್ಯಕ್ಷ ಪುರುಷೋತ್ತಮ ಸಾಲಿಯನ್, ಶ್ರೀ ದುರ್ಗಾ ಪ್ರಾಭಿಕೇಶನ್ ಮಾಲಕ ಉಮೇಶ್ ಬೋಳಂತೂರು, ಅಮೆಚೂರ್ ಕಬಡ್ಡಿ ತೀರ್ಪುಗಾರರ ಮಂಡಳಿ ಅಧ್ಯಕ್ಷ ಸುರೇಶ್ ಮೈರಡ್ಕ, ಅನುಗ್ರಹ ಅರ್ಥ್ ಮೂವರ್ಸ್ ಮೂಲಕ ಪ್ರಕಾಶ್ ವಾಸ್, ಭಯಂಕೇಶ್ವರ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಉಮೇಶ್ ನೆಲ್ಲಿಗುಡ್ಡೆ, ಉದ್ಯಮಿ ಸನತ್ ರಕ್ಷಾ ಕೆದ್ದೇಲ್, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಲಕ್ಷ್ಮಿ ಪ್ರಕಾಶ್, ತಾಯಂದಿರಿ ಸಮಿತಿ ಅಧ್ಯಕ್ಷ ಉಷಾಲಾಕ್ಷಿ ಮೊದಲಾದವರು ಉಪಸ್ಥಿತರಿದ್ದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಅಂಚನ್ ಪ್ರಾಸ್ತಾವಿಕ ದೊಂದಿಗೆ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಸುಜಾತ ಎ ಎಸ್ ಶಾಲಾ ವಾರ್ಷಿಕ ವರದಿ ವಾಚಿಸಿ, ಶಿಕ್ಷಕಿ ವಿಲ್ಮಾ ಪ್ರೆಸಿಲ್ಲಾ ಪಿಂಟೋ ವಂದಿಸಿದರು. ಶಿಕ್ಷಕಿಯರಾದ ದೀಪಿಕಾ ಶೆಟ್ಟಿ ಹಾಗೂ ಶೋಭಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಪ್ರವೀಣ ಕುಮಾರಿ,ಸುಜಾತ, ನತಲಿಯಾ ಸಿಂತಿಯಾ ಮಿನೇಜಸ್,ದಿವ್ಯಶ್ರೀ ಕೆ ಎಸ್, ಪೂಜಾ ,ಮಹೇಶ್ವರಿ,ಹರಿಣಾಕ್ಷಿ ,ಅನಿತಾ,ಭವಾನಿ, ಯಮುನಾ, ದಿವ್ಯಶ್ರೀ ,ಸುನಿತಾ, ನಿಶಾ, ಕೃತಿ, ಕ್ಷಮಾ ಪ್ರಿಂಟರ್ ಮಿಥುನ್, ಶಾಲಾಭಿವೃದ್ಧಿ ಹಾಗೂ ತಾಯಂದಿರ ಸಮಿತಿಯ ಸದಸ್ಯರುಗಳು ಸಹಕರಿಸಿದರು.