ಭಾರತೀಯರ ಅಡುಗೆಯಲ್ಲಿ ಕರಿಬೇವಿನ ಎಲೆಯ ಬಳಕೆ ತಲತಲಾಂತರಗಳಿಂದ ಬಂದಿದೆ. ಅಡುಗೆ ಮನೆಯಲ್ಲಿ ಕರಿ ಬೇವಿನ ಎಲೆ ಇಲ್ಲದೇ ಇರುವುದಿಲ್ಲ. ಇದರ ಎಲೆಗಳು ಔಷಧೀಯ ಗುಣಗಳನ್ನು ಹೊಂದಿದೆ. ಹಾಗಾಗಿ ಇದನ್ನು ಆಹಾರದಲ್ಲಿ ಹೆಚ್ಚು ಬಳಸಲಾಗುತ್ತದೆ. ಇದು ಅಡುಗೆಯ ರುಚಿಯನ್ನು ಹೆಚ್ಚು ಮಾಡುತ್ತದೆ. ಇದರಲ್ಲಿ ಹೆಚ್ಚು ಆರೋಗ್ಯಕರ ಪ್ರಯೋಜಗಳಿವೆ.

ಮಸಾಲೆ ಪದಾರ್ಥಗಳಲ್ಲಿ ಬಳಸುವ ಎಲೆಗಳನ್ನು ಸಾಮಾನ್ಯವಾಗಿ “ಕರಿಬೇವಿನ ಎಲೆಗಳು” ಎನ್ನಲಾಗುತ್ತದೆ, ಆದರೆ ಇವುಗಳಿಗೆ “ಸಿಹಿ ಬೇವಿನ ಎಲೆಗಳು” ಎಂತಲೂ ಕರೆಯಲಾಗುತ್ತದೆ. ದಕ್ಷಿಣ ಭಾರತದಲ್ಲಿ ಇದು ಮಸಾಲೆ ಪದಾರ್ಥಗಳಲ್ಲಿ ಬಳಸಲಾಗುವ ಅವಿಭಾಜ್ಯ ಘಟಕವಾಗಿದ್ದು, ಅಲ್ಲಿ ಕರಿಬೇವಿನ ಎಲೆಗಳಿಲ್ಲದೇ ಮಸಾಲೆ ಪದಾರ್ಥವು ರುಚಿಹೀನ ಎಂದು ಭಾವಿಸಲಾಗುತ್ತದೆ. ಎಲೆಯ ನೋಟವು ಕಹಿಯಾದ ಬೇವಿನ ಮರದ ಎಲೆಗಳ ಹಾಗೆ ಇರುವುದರಿಂದ ಕನ್ನಡದಲ್ಲಿ ಇದನ್ನು “ಕರಿ ಬೇವು” ಎಂದು ಕರೆಯಲಾಗುತ್ತದೆ.

ಬ್ಯೂಟಿ ಟಿಪ್ಸ್

*‌ ಕರಿ ಬೇವಿನ ಎಲೆಗಳನ್ನು ಚನ್ನಾಗಿ ಬಿಸಿಲಿನಲ್ಲಿ ಒಣಗಿಸಿ, ನಂತರ ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕುದಿಸಿ, ಆ ಎಣ್ಣೆಯನ್ನು ಕೂದಲಿಗೆ ನಿಯಮಿತವಾಗಿ ಹಚ್ಚುವುದರಿಂದ ಕೂದಲಿನ ಹಲವು ಸಮಸ್ಯೆಗಳಾದ ಕೂದಲು ಉದುರುವುದು, ತಲೆಹೊಟ್ಟು ಹಾಗೂ ಒಣ ಕೂದಲಿನ ಸಮಸ್ಯೆಗೆ ಮುಕ್ತಿ ಸಿಗುತ್ತದೆ.

* ಕರಿಬೇವಿನ ಎಲೆಗಳನ್ನು ತೆಂಗಿನ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಕುದಿಸಿ ಕೂಲಿಗೆ ಹಚ್ಚುವುದು ಹಾನಿಗೊಳಾಗಾದ ಕೂದಲನ್ನು ಸರಿ ಪಡಿಸಲು ಸಹಾಯ ಮಾಡುತ್ತದೆ. ಕರಿಬೇವಿನ ಎಣ್ಣೆಯು ನೆತ್ತಿಯ ಆರೋಗ್ಯವನ್ನು ಸುಧಾರಿಸುತ್ತದೆ. ಡ್ಯಾಂಡ್ರಫ್, ಸೋರಿಯಾಸಿಸ್ ಸಮಸ್ಯೆಗಳಿಗೆ ಮುಕ್ತಿ ನೀಡುತ್ತದೆ.

ಕರಿಬೇವಿನ ಎಲೆ ಮತ್ತು ಮೊಸರಿನ ಹೇರ್ ಮಾಸ್ಕ್

ಒಂದು ಬಟ್ಟಲಿನಲ್ಲಿ, 1/4 ಕಪ್ ಕರಿಬೇವಿನ ಎಲೆಗಳನ್ನು 1/2 ಕಪ್ ಮೊಸರನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಿ. ನಂತರ ಅದನ್ನು ಕೂದಲು ಮತ್ತು ನೆತ್ತಿಗೆ ಹಚ್ಚಿ ಮತ್ತು 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಈ ಹೇರ್ ಪ್ಯಾಕ್ ಬಳಸುವುದು ನಿಮ್ಮ ನೆತ್ತಿಯ ಆರೋಗ್ಯವನ್ನು ಕಾಪಾಡುತ್ತದೆ ಹಾಗೂ ಕೂದಲು ಉದುರುವುದನ್ನ ತಡೆಯುತ್ತದೆ.