ಬದಿಗುಡ್ಡೆ ರಸ್ತೆ ಗುದ್ದಲಿ ಪೂಜೆ ಕಾರ್ಯಕ್ರಮ

ಕಡೇಶಿವಾಲಯ ಗ್ರಾಮದ ಬದಿಗುಡ್ಡೆ ದೈವಸ್ಥಾನದ ರಸ್ತೆಗೆ ಹಲವು ವರ್ಷಗಳಿಂದ ಕಾರ್ಯಕರ್ತರು ಮಾಡಿದ ಬೇಡಿಕೆ ಇದೀಗ ನನಸಾಗಿದೆ.

ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ಅನುದಾನದಡಿ ₹5 ಲಕ್ಷ ಮೊತ್ತದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.

ಈ ಮಹತ್ವದ ಕಾರ್ಯಕ್ಕಾಗಿ ಅವಿರತವಾಗಿ ಶ್ರಮಿಸಿದ ಬೂತ್ ಅಧ್ಯಕ್ಷರಾದ ಶಿವಾನಂದ ಅವರ ಪ್ರಯತ್ನ ವಿಶೇಷವಾಗಿ ಶ್ಲಾಘನೀಯವಾಗಿದೆ.

ಪಚ್ಚಡಿಬೈಲು ಸುಬ್ರಹ್ಮಣ್ಯ ಭಟ್ ಅವರು ತೆಂಗಿನಕಾಯಿ ಒಡೆಯುವ ಮೂಲಕ ರಸ್ತೆಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಬಂಟ್ವಾಳ ಮಂಡಲ ಅಧ್ಯಕ್ಷರಾದ ಚೆನ್ನಪ್ಪ ಕೊಟ್ಯಾನ್, ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಜೀನರಾಜ್ ಕೊಟ್ಯಾನ್, ಕಡೇಶಿವಾಲಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಭಾರತಿ ಎಸ್. ರಾವ್, ಬೂತ್ ಅಧ್ಯಕ್ಷರಾದ ಶಿವಾನಂದ, ಪಂಚಾಯತ್ ಸದಸ್ಯರಾದ ಸುರೇಶ್ ಬನಾರಿ ಹಾಗೂ ವಶಿತಾ ಉಪಸ್ಥಿತರಿದ್ದರು.

ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಶರತ್ ಅಮೈ, ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸಂಪತ್ ಹಾಗೂ ಗ್ರಾಮದ ಪ್ರಮುಖರಾದ ಸಾಂತಪ್ಪ ಪೂಜಾರಿ ಪಚ್ಚಡಿಬೈಲು, ನಾರಾಯಣ ಸಪಲ್ಯ, ಸಂಜೀವ ಪೂಜಾರಿ ಶಾಂತಿಗುಡ್ಡೆ, ದೇವದಾಸ್ ಪಚ್ಚಡಿಬೈಲು, ಹರಿಶ್ಚಂದ್ರ ಮುಂಗೂರು, ಭಾಸ್ಕರ ಮುಂಗೂರು, ಅನಿಲ್, ಪ್ರಹ್ಲಾದ್ ಶೆಟ್ಟಿ ಮಿತ್ತಿಮಾರ್, ಶಿವಪ್ರಸಾದ್ ಮಿತ್ತಿಮಾರ್ ಹಾಗೂ ಸತ್ಯದೇವತೆ ಗೆಳೆಯರ ಬಳಗದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

ಹಲವಾರು ವರ್ಷಗಳಿಂದ ಸಂಕಷ್ಟದಲ್ಲಿದ್ದ ಈ ರಸ್ತೆಗೆ ಕಾಂಕ್ರೀಟ್ ರಸ್ತೆ ನಿರ್ಮಾಣ ಸಾಧ್ಯವಾಗಲು ನಿಸ್ವಾರ್ಥವಾಗಿ ಸಹಕರಿಸಿದ ಎಲ್ಲರಿಗೂ ಅನಂತ ಅನಂತ ಧನ್ಯವಾದಗಳು ತಿಳಿಸಿದ್ದಾರೆ.