ಬಂಟ್ವಾಳ : ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕ ತಿಮ್ಮಪ್ಪ ನಾಯ್ಕರವರು ಹಿಂದೆ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮಲ್ಲಡ್ಕ ಹಿರಿಯ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ. ವತಿಯಿಂದ ಅಭಿನಂದನಾ ಕಾರ್ಯಕ್ರಮ ಶ್ರೀ ರಾಮಚಂದ್ರ ಪ. ಪೂ. ಕಾಲೇಜು ಪೆರ್ನೆಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆರ್ನೆ ಗ್ರಾ.ಪಂ ಸದಸ್ಯರಾದ ನವೀನ್ ಕುಮಾರ್ ಪದೆಬರಿ ವಹಿಸಿದ್ದರು.
ಪೆರ್ನೆ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಶೇಖರ್ ಶೆಟ್ಟಿ, ಪೆರ್ನೆ ಗ್ರಾ ಪಂ ಸದಸ್ಯ ಕೇಶವ ಸುಣ್ಣಾನ, ವಲಯ ಯೋಜನಾಧಿಕಾರಿ ಶ್ರೀಮತಿ ಶಾರದ, ಮಲ್ಲಡ್ಕ ಶಾಲಾ ಮಾಜಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ದಾನಿಗಳಾದ ಸಂಜೀವ ಭಂಡಾರಿ, ಪೆರ್ನೆ ಪಂಚಾಯತ್ ಸದಸ್ಯೆಯರಾದ ಯಶೋದಾ, ಜಯಂತಿ, ಸುಮತಿ, ಸಮಾಜ ಸೇವಕರಾದ ಗೋಪಾಲ ಸಪಲ್ಯ, ಸುರೇಶ್ ಉಪಸ್ಥಿತರಿದ್ದರು.
ಸುಮಲತಾ ಸ್ವಾಗತಿಸಿ, ಮಲ್ಲಡ್ಕ ನಳಿನಿ ವಂದಿಸಿ, ಜಯಶ್ರೀ ಅರ್ಬಿ ಕಾರ್ಯಕ್ರಮ ನಿರೂಪಿಸಿದರು.