ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್(ರೀ ) ಬಂಟ್ವಾಳ ಇದರ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ, ಬಂಟ್ವಾಳ ವಲಯದ ಮೂಡ ನಡುಗೊಡು ನವಜ್ಯೋತಿ ಜ್ಞಾನ ವಿಕಾಸ ಕೇಂದ್ರದಡಿಯಲ್ಲಿ ಮೂರು ತಿಂಗಳ ಉಚಿತ ಟೈಲರಿಂಗ್ ತರಬೇತಿ ನಡೆಸಿದ್ದು ಇದರ ಸಮಾರೋಪ ಸಮಾರಂಭ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಪೂವಪ್ಪ ಮೆಂಡನ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲ್ಲೂಕಿನ ಯೋಜನಾಧಿಕಾರಿ ಮಾಧವ ಗೌಡ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಿ ಬದುಕು ಕಟ್ಟಿಕೊಳ್ಳುವ ಸಲುವಾಗಿ ಉಚಿತ ತರಬೇತಿಗಳನ್ನು ನೀಡಲಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಂಡು ಸ್ವಾವಲಂಬಿ ಜೀವನ ನಡೆಸಿ ಎಂದು ಶುಭ ಹಾರೈಸಿ, ಶಿಬಿರಾರ್ಥಿಗಳಿಗೆ ತರಬೇತಿ ಪ್ರಮಾಣ ಪತ್ರವನ್ನು ವಿತರಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀ ದುರ್ಗಾ ಮಹಿಳಾ ಮಂಡಳಿಯ ಉಪಾಧ್ಯಕ್ಷರಾದ ದೇವಕಿ, ಟೈಲರಿಂಗ್ ಶಿಕ್ಷಕಿ ಶಶಿಕಲಾ, ಉಪಸ್ಥಿತರಿದ್ದರು.
ವಲಯದ ಮೇಲ್ವಿಚಾರಕರಾಕಿ ರೂಪಾ ಜೆ. ಶೆಟ್ಟಿ ಸ್ವಾಗತಿಸಿ, ಸೇವಾ ಪ್ರತಿನಿಧಿ ಪ್ರಪುಲ್ಲಾ ವಂದಿಸಿ, ತಾಲೂಕಿನ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಕಮಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.