ತುಮಕೂರಿನ ಶ್ರೀ ಸಿದ್ಧಿವಿನಾಯಕ ಕಲ್ಯಾಣ ಮಂದಿರದಲ್ಲಿ ಪಕ್ಷ ಆಯೋಜಿಸಿದ್ದ “ಶಕ್ತಿ ವಂದನಾ ಅಭಿಯಾನ” ದ ಸಮಾರೋಪ ಸಮಾರಂಭದಲ್ಲಿ ಬಿ.ಜೆ.ಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾಗವಹಿಸಿದರು.
ಬಳಿಕ ಮಾತನಾಡಿ ದೇಶಾದ್ಯಂತ ಸುಮಾರು 2,67,295 ಸ್ವ ಸಹಾಯ ಸಂಘಗಳು ಹಾಗೂ ಎನ್.ಜಿ.ಒ ಗಳೊಂದಿಗೆ ಸಂಪರ್ಕ ಸಾಧಿಸಿ 25 ಲಕ್ಷಕ್ಕೂ ಹೆಚ್ಚಿನ ಮಹಿಳೆಯರನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ ಸಂಕಲ್ಪ’ ಅಭಿಯಾನದೊಂದಿಗೆ ಜೋಡಿಸುವ ಮಹತ್ವದ ಗುರಿ ಈಡೇರಿಕೆಗೆ ಶಕ್ತಿಮೀರಿ ಶ್ರಮಿಸಬೇಕೆಂಬ ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಜೇಶ್ ಜಿ.ವಿ., ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷರಾದ ಕು.ಮಂಜುಳಾ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರೀತಮ್ ಜಿ.ಗೌಡ, ಮಾಜಿ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ, ಜಿಲ್ಲಾಧ್ಯಕ್ಷರಾದ ಶ್ರೀ ಹೆಚ್.ಎಸ್.ರವಿಶಂಕರ್, ಶಾಸಕರಾದ ಶ್ರೀ ಜಿ.ಬಿ.ಜ್ಯೋತಿ ಗಣೇಶ್ ,ಎಂ.ಎಲ್.ಸಿ. ಶ್ರೀ ನವೀನ್, ರಾಜ್ಯ ಕಾರ್ಯದರ್ಶಿ ಶ್ರೀ ವಿನಯ್ ಬಿದ್ರೆ , ಮುಖಂಡರಾದ ಶ್ರೀ ಕೃಷ್ಣ ಕುಮಾರ್, ಸೇರಿದಂತೆ ಪಕ್ಷದ ಮುಖಂಡರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಮಹಿಳಾ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.