ಬೆಂಗಳೂರು: ಇತಿಹಾಸದಲ್ಲೇ ಮೊದಲ ಬಾರಿಗೆ ತೆಂಗಿನಕಾಯಿ ದರ (Coconut) ಶತಕ ಸಮೀಪಿಸಿದ್ದು, ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದೆ.

ಸಾಮಾನ್ಯವಾಗಿ ಒಂದು ಕೆ.ಜಿ ತೆಂಗಿನಕಾಯಿಗೆ 30 ರೂ. ಆಸುಪಾಸಿನಲ್ಲಿರುತ್ತಿತ್ತು. ಆದರೆ ಇದೀಗ ದ್ವಿಗುಣಗೊಂಡಿದ್ದು, ಒಂದು ಕೆ.ಜಿಗೆ ಬರೋಬ್ಬರಿ 70-80 ರೂ.ಗೆ ತಲುಪಿದೆ. ಒಂದೆಡೆ ತೆಂಗು ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದ್ದು, ಇನ್ನೊಂದೆಡೆ ಜನ ಸಾಮಾನ್ಯರಿಗೆ ಹೊರೆಯಾಗಿದೆ . ಇದನ್ನೂ ಓದಿ : ಮಂಗಳೂರು : ತಮ್ಮನ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಅಕ್ಕ ಕೂಡ ಅಪಘಾತಕ್ಕೆ ಬಲಿ

ಇನ್ನೂ ತೆಂಗಿನಕಾಯಿ ಜೊತೆ ಕೊಬ್ಬರಿ, ಕೊಬ್ಬರಿ ಎಣ್ಣೆ, ಎಳನೀರು ದರದಲ್ಲೂ ಭಾರೀ ಏರಿಕೆಯಾಗಿದೆ. ಶುದ್ಧ ಕೊಬ್ಬರಿ ಎಣ್ಣೆ ಲೀಟರ್‌ಗೆ 310 ರೂ. ಆದರೆ, ಎಳನೀರು ಒಂದಕ್ಕೆ 70 ರೂ.ಯಾಗಿದೆ. ಈ ಮೂಲಕ ಹಿಂದೆಂದಿಗಿಂತಲೂ ಈ ಸಲ ಭಾರೀ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.

ಶೀಘ್ರದಲ್ಲೇ ಕೆ.ಜಿ ತೆಂಗಿನಕಾಯಿ ಬೆಲೆ 100 ರೂ.ಗೂ ಅಧಿಕವಾಗುವ ಸಾಧ್ಯತೆಯಿದ್ದು, ಇನ್ನೂ 6 ತಿಂಗಳು ದರ ಇಳಿಕೆ ಸಾಧ್ಯತೆ ಇಲ್ಲ ಎನ್ನುತ್ತಿದ್ದಾರೆ. ಗರಿ ರೋಗದ ಎಫೆಕ್ಟ್ನಿಂದಾಗಿ ಇಳುವರಿಯಲ್ಲಿ ಭಾರಿ ಇಳಿಕೆಯಾಗಿದ್ದು, ಇದರಿಂದಾಗಿ ತೆಂಗು ದುಬಾರಿಯಾಗಿದೆ. ಇದರಿಂದ ದರ ಕೇಳಿಯೇ ಸಾಮಾನ್ಯ ಜನರಿಗೆ ಶಾಕ್ ಆಗಿದೆ.

ಬೆಲೆ ಏರಿಕೆಗೆ ಕಾರಣ:
– ಕಳೆದ ಕೆಲವು ವರ್ಷಗಳಿಂದ ಬೆಲೆ ಕುಸಿತದಿಂದ ಕಂಗಾಲಾಗಿದ್ದ ತೆಂಗು ಬೆಳೆಗಾರರು
– ಬಹುತೇಕರು ಅಡಿಕೆಯತ್ತ ಒಲವು ತೋರಿದ್ದು, ತೆಂಗು ಬೆಳೆಯುವ ಪ್ರದೇಶವನ್ನು ಅಡಿಕೆ ಆವರಿಸಿಕೊಂಡಿದೆ.
– ಜೊತೆಗೆ ಗರಿ ರೋಗ ಕೂಡ ತೆಂಗಿಗೆ ಹೆಚ್ಚಾಗಿದೆ.
– ಪರಿಣಾಮ ಇಳುವರಿ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ.
– ಈ ಹಿನ್ನೆಲೆಯಲ್ಲಿ ಉತ್ಪಾದನೆ ಕುಂಠಿತವಾಗಿದೆ.
– ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮಾಲು ಬಾರದಿರುವುದರಿಂದ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.