ಮಂಡ್ಯ ಜಿಲ್ಲೆಯ ಕಾವೇರಿ ಪ್ರತಿಮೆಯ ಬಳಿ ಆಯೋಜಿಸಿದ್ದ ಸಮಾರಂಭದಲ್ಲಿ ಕಾವೇರಿ ತಾಯಿಯನ್ನು ಪೂಜಿಸಿ, ಆಕೆಯ ಮಡಿಲಿಗೆ ಸಿ.ಎಂ.ಸಿದ್ಧರಾಮಯ್ಯ  ಬಾಗಿನ ಅರ್ಪಿಸಿದರು.  ಪ್ರತಿ ವರ್ಷ ಹೀಗೆಯೇ ಪ್ರಕೃತಿಯ ಒಡಲು ತುಂಬಿ, ಎಲ್ಲೆಡೆ ಹಸಿರು ಹೊದ್ದು ಸಕಲ ಜೀವರಾಶಿಗಳ ಬದುಕು ಹಸನಾಗಲಿ ಎಂದು ಈ ವೇಳೆ ಪ್ರಾರ್ಥಿಸಿದರು.

ಮಂಡ್ಯ ಜಿಲ್ಲೆಯ ಕಾವೇರಿ ಪ್ರತಿಮೆಯ ಬಳಿ ಆಯೋಜಿಸಿದ್ದ ಸಮಾರಂಭದಲ್ಲಿ ಕಾವೇರಿ ತಾಯಿಯನ್ನು ಪೂಜಿಸಿ, ಆಕೆಯ ಮಡಿಲಿಗೆ ಸಿ.ಎಂ.ಸಿದ್ಧರಾಮಯ್ಯ  ಬಾಗಿನ ಅರ್ಪಿಸಿದರು

ಯಾರ ಕಾಲ್ಗುಣವೂ ಮಳೆ – ಬರವನ್ನು ನಿರ್ಧರಿಸದು, ಆ ಶಕ್ತಿಯಿರುವುದು ಪ್ರಕೃತಿಗೆ ಮಾತ್ರ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಕಾವೇರಿ ತಾಯಿ, ಚಾಮುಂಡೇಶ್ವರಿ ತಾಯಿಯ ಕೃಪಾಕಟಾಕ್ಷದಿಂದ ರಾಜ್ಯ ಸುಭಿಕ್ಷವಾಗಿದೆ. ಎಲ್ಲಾ ಜಲಾಶಯಗಳೂ ತುಂಬಿವೆ. ಎಲ್ಲಾ ನಾಲೆಗಳಿಗೂ ತಕ್ಷಣದಿಂದ ನೀರು ಹರಿಸಲು ಆದೇಶ ನೀಡುತ್ತಿದ್ದೇನೆ ಎಂದರು.
ಏಳೆಂಟು ದಶಕಗಳ ನಂತರ ಜೂನ್ ತಿಂಗಳಿನಲ್ಲಿಯೇ ಕೃಷ್ಣರಾಜಸಾಗರ ಅಣೆಕಟ್ಟು ಭರ್ತಿಯಾಗಿದೆ. ಕಳೆದ ವರ್ಷ ಕೂಡ ರಾಜ್ಯ ಸಮೃದ್ಧ ಮಳೆ, ಬೆಳೆ ಕಂಡಿತ್ತು. ನಾಡಿನ ಬಗೆಗೆ ಇಷ್ಟೆಲ್ಲಾ ಪ್ರೀತಿ, ಕೃಪೆ ತೋರುತ್ತಿರುವ ಪ್ರಕೃತಿ ಮಾತೆಗೆ ನಮಿಸುವುದು ಈ ನಾಡಿನ ಅನ್ನದ ಋಣವಿರುವ ಪ್ರತಿಯೊಬ್ಬರ ಕರ್ತವ್ಯ. ಸಮಸ್ತ ಕನ್ನಡಿಗರ ಪರವಾಗಿ ಈ ಕರ್ತವ್ಯವನ್ನು ನಾನಿಂದು ಶ್ರದ್ಧಾ ಭಕ್ತಿಗಳಿಂದ ನಿರ್ವಹಿಸಿದ್ದೇನೆ.