ಇಂದು ರಾಷ್ಟ್ರೀಯ ಸೈನಿಕ್ ಸ್ಮಾರಕ ಮ್ಯಾನೇಜ್ಮೆಂಟ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ದೇಶದ ಹೆಮ್ಮೆಯ ಸೈನಿಕರ ತ್ಯಾಗ – ಬಲಿದಾನದ ಸಂಕೇತವಾದ ವೀರಗಲ್ಲನ್ನು ಲೋಕಾರ್ಪಣೆಗೊಳಿಸಿ, ಹುತಾತ್ಮ ಯೋಧರಿಗೆ  ಸಿ.ಎಂ.ಸಿದ್ಧರಾಮಯ್ಯ ಅವರು  ನಮಿಸಿದರು.ಇದನ್ನೂ ಓದಿ :  ಹಾಸನ ಜಿಲ್ಲೆ ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆ
ಬಳಿಕ ಮಾತನಾಡಿ ವಿವಿಧತೆಯಲ್ಲಿ ಏಕತೆ, ಬಹುತ್ವ ಸಂಸ್ಕೃತಿ ಈ ನೆಲದ ವೈಶಿಷ್ಟ್ಯ ಮಾತ್ರವಲ್ಲ, ಶಕ್ತಿಯೂ ಹೌದು. ಇದಕ್ಕಾಗಿ ಲಕ್ಷಾಂತರ ಜೀವಗಳು ತಮ್ಮ ಬದುಕು ಸಮರ್ಪಿಸಿವೆ. ಅವರೆಲ್ಲರ ಬಲಿದಾನ ವ್ಯರ್ಥವಾಗದಂತೆ ಭವ್ಯ ಭಾರತ ನಿರ್ಮಾಣಕ್ಕಾಗಿ ಶ್ರಮಿಸುವ ಹೊಣೆ ನಮ್ಮದು ಎಂದರು.  ಇದನ್ನೂ ಓದಿ : ಕಲ್ಲಡ್ಕ : ಕಾರ್ಗಿಲ್ ಸಂಸ್ಮರಣೆ
ಈ ಸಂದರ್ಭದಲ್ಲಿ ಸಚಿವರಾದ ಡಾ.ಜಿ.ಪರಮೇಶ್ವರ, ವಸತಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.