ಆಳ ಸಮುದ್ರಕ್ಕೆ ತೆರಳುವ ಮೀನುಗಾರಿಕೆ ದೋಣಿಗಳು ಅಪಘಾತಕ್ಕೀಡಾದರೆ ಅಥವಾ ಅನಾರೋಗ್ಯಕ್ಕೆ ಒಳಗಾಗುವ ಮೀನುಗಾರರನ್ನು ತ್ವರಿತವಾಗಿ ದಡಕ್ಕೆ ಕರೆತರಲು “ಸಿ ಆಂಬುಲೆನ್ಸ್” ಸೌಲಭ್ಯ ಕಲ್ಪಿಸಿಕೊಡುವಂತೆ ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್‌ ನಾಯಕರಾದ ರಾಹುಲ್‌ ಗಾಂಧಿ ಅವರನ್ನು ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಮೀನುಗಾರರ ಜೊತೆ ಸಂವಾದ ನಡೆಸುವ ವೇಳೆ ಮೀನುಗಾರ ಕುಟುಂಬದ ಮಹಿಳೆಯರು ಒತ್ತಾಯಿಸಿದ್ದರು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಬೇಡಿಕೆ ಈಡೇರಿಸುವುದಾಗಿ ರಾಹುಲ್ ಗಾಂಧಿ ಅವರು ಮೀನುಗಾರ ಕುಟುಂಬದ ಮಹಿಳೆಯಗೆ ಭರವಸೆ ನೀಡಿದ್ದರು.

ಸಿ.ಎಂ.ಸಿದ್ಧರಾಮಯ್ಯ ಅವರು ಬಜೆಟ್‌ನಲ್ಲಿ ಪ್ರಪ್ರಥಮ ಬಾರಿಗೆ “ಸಿ ಆಂಬುಲೆನ್ಸ್” ಖರೀದಿಗೆ ರೂ.7 ಕೋಟಿ ಅನುದಾನ ಘೋಷಿಸಿ, ನಾವು ನುಡಿದಂತೆ ನಡೆದಿದ್ದೇವೆ ಎಂದರು.