ಅಂತಾರಾಷ್ಟ್ರೀಯ ಸಮ್ಮೇಳನದ ಪ್ರಯೋಜನ ಯುವಜನತೆಗೆ ಆಗಲಿ. ಜಾಗತಿಕ ಮಟ್ಟದಲ್ಲಿ ವ್ಯಕ್ತಿತ್ವ ವಿಕಾಸವಾಗಲಿ ಎಂದು ರಣದೀಪ್ ಐಎಎಸ್, ಹೆಚ್ಚುವರಿ ಮುಖ್ಯಕಾರ್ಯದರ್ಶಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕರ್ನಾಟಕ ಸರ್ಕಾರದ ರಣದೀಪ್ ಅವರು ನುಡಿದರು.
ಯುವಜನ ಮತ್ತು ಕ್ರೀಡಾ ಸಚಿವಾಲಯ ಭಾರತ ಸರ್ಕಾರ ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ ಇದರ ಸಹಯೋಗದಲ್ಲಿ ಮೇ 15 ರಂದು ಯೆಂಡೂರನ್ಸ್ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಐಕಾನ್ಯೂತ್ — 2025 ಇದರ ಸಮಾರೋಪದಲ್ಲಿ ಅವರು ಮಾತನಾಡಿದರು.
ಚೇತನ್ಆರ್, ಐಪಿಎಸ್, ಆಯುಕ್ತರು, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ ಇವರು ಯುವಪೀಳಿಗೆಯ ಏಳಿಗೆಗೆ ಇದೊಂದು ಉತ್ತಮ ಸಮ್ಮೇಳನ ಎಂದರು. ಗೌರವಾನ್ವಿತ ಉಪಕುಲಪತಿ ಡಾ. ವಿಜಯ ಕುಮಾರ್ಸಭಾ ಅಧ್ಯಕ್ಷತೆ ವಹಿಸಿ ಸಂಘಟಕರ ಹಾಗೂ ಆಗಮಿಸಿದ ಸರ್ವರ ಕಾರ್ಯದಕ್ಷತೆಯಿಂದ ಈಸಮ್ಮೇಳನ ಪರಿಪೂರ್ಣಯಶಸ್ಸನ್ನು ಕಂಡಿದೆ ಎಂದು ಅಭಿನಂದನೆ ಸಲ್ಲಿಸಿದರು.
ಮಾಧೀಶ್ಪರಿಖ್, ಸಂಸ್ಥಾಪಕ ಹಾಗೂ ನಿರ್ದೇಶಕರು ಬ್ರಿಕ್ಸ್ಮೈತ್ರಿಕೂಟ, ಡಾ. ಬಿ. ಟಿ. ನಂದೀಶ್ , ಪರೀಕ್ಷಾ ನಿಯಂತ್ರಕರು ಯೆನೆಪೋಯ ವಿಶ್ವವಿದ್ಯಾಲಯ, ಶ್ರೀಕಾರ್ತಿಗೇಯನ್, ಪ್ರಾದೇಶಿಕ ನಿರ್ದೇಶಕರು, ಎನ್ಎಸ್ಎಸ್ಮತ್ತುಡಾ. ಪ್ರತಾಪ್ಲಿಂಗಯ್ಯ, ರಾಜ್ಯ ಎನ್ಎಸ್ಎಸ್ಅಧಿಕಾರಿ ಉಪಸ್ಥಿತರಿದ್ದರು.
ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ. ಅಶ್ವಿನಿಡಿ. ಶೆಟ್ಟಿ ಅವರು ಗಣ್ಯರನ್ನುಸ್ವಾಗತಿಸಿ, ವರದಿ ಮಂಡಿಸಿದರು. ಡಾ. ದಿವ್ಯರಾಣಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮ ಅಧಿಕಾರಿ, ಪ್ರಿಯ ಮತ್ತು ಆದಿತ್ಯಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಮ್ಮೇಳನದಲ್ಲಿ ಭಾರತ ಮತ್ತು 5 ದೇಶಗಳ 650ಕ್ಕೂ ಹೆಚ್ಚು ಯುವಪ್ರತಿನಿಧಿಗಳು ಭಾಗವಹಿಸಿದ್ದರು.