ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಗ್ಗ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ವಗ್ಗ ಪ್ರೌಢ ಶಾಲೆಯಲ್ಲಿ ಸ್ವಚ್ಛತಾ ಶ್ರಮಧಾನ ಕಾರ್ಯಕ್ರಮ ಜರಗಿತು.
ಶೌರ್ಯ ತಂಡದ ಸದಸ್ಯರು ಶಾಲೆಯ ಆವರಣದ ಸುತ್ತಲೂ ಮರ ಹುಲ್ಲು ಗಿಡ ಕಡ್ಡಿಗಳನ್ನು ಸ್ವಚ್ಛಗೊಳಿಸಿದರು.
ಈ ಶ್ರಮದಾನ ಕಾರ್ಯದಲ್ಲಿ ಶೌರ್ಯ ಘಟಕದ ಅಧ್ಯಕ್ಷ ಪ್ರವೀಣ, ಸದಸ್ಯರುಗಳಾದ ಸಂಪತ್ ಶೆಟ್ಟಿ, ಮಹಾಬಲ ರೈ, ಅಶೋಕ ಹಾರೊದ್ದು, ಶಶಿಕಲಾ, ಮೋಹನಂದ, ಕೀರ್ತಿರಾಜ್, ನಾರಾಯಣ್ ಶೆಟ್ಟಿ, ಆನಂದ, ಪ್ರಮೀಳ, ಪವಿತ್ರ ಅಶೋಕ ಬೊಲ್ಮಾರು, ವಿನೋದ್, ನಾರಾಯಣ ಪೂಜಾರಿ, ರಮೇಶ, ಪ್ರಿಯಾಂಕ, ಜನಾರ್ದನ, ಕಾವಳಪಡುರು ಗ್ರಾಮ ಪಂಚಾಯತ್ ಸದ ಸ್ಯರಾದ ವೀರೇಂದ್ರ ಅಮೀನ್, ಯೋಜನೆಯ ವಗ್ಗ ವಲಯ ಮೇಲ್ವಿಚಾರಕಿ ಸವಿತಾ, ಶೌರ್ಯ ಘಟಕದ ಸಂಯೋಜಕಿ ರೇಖಾ ಪಿ, ಸೇವಾ ಪ್ರಿನಿಧಿ ರಜನಿ ಪಾಲ್ಗೊಂಡಿದ್ದರು.