ಮೈಕೆಲ್ ಫರ್ನಾಂಡಿಸ್ ಸರಳ, ಸಜ್ಜನಿಕೆಯ, ಪ್ರಾಮಾಣಿಕ ಹೋರಾಟಗಾರರು. ಇಂತಹ ಸಮಾಜವಾದಿ ವ್ಯಕ್ತಿ ಮತ್ತು ವ್ಯಕ್ತಿತ್ವಗಳು ಬಹಳ ಅಪರೂಪ. ಕಾರ್ಮಿಕ ಸಚಿವರಾಗುವ ಅವಕಾಶ ಮನೆ ಬಾಗಿಲಿಗೆ ಹುಡುಕಿಕೊಂಡು ಬಂದರೂ, ಸಚಿವರಾಗಿ ಕಾರ್ಮಿಕರಿಗೆ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಸಚಿವ ಸ್ಥಾನ ತಿರಸ್ಕರಿಸಿ ಹೋರಾಟ ಮಾರ್ಗದಲ್ಲೇ ಮುಂದುವರೆದರು ಎಂದು ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ಧರಾಮಯ್ಯ ಹೇಳಿದರು.
ಹಿಂದ್ ಮಜ್ದೂರ್, ಕಿಸಾನ್ ಪಂಚಾಯತ್ ಮತ್ತು ಸಂತೋಷ್ ಲಾಡ್ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಮಿಕ ನಾಯಕ, ಮಾಜಿ ಶಾಸಕ ಮೈಕೆಲ್ ಫರ್ನಾಂಡೀಸ್ ಅವರ 92ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಮೈಕೆಲ್ ಫರ್ನಾಂಡೀಸ್ ಮತ್ತು ಪತ್ನಿ ಡೋನಾ ಫರ್ನಾಂಡೀಸ್ ಅವರನ್ನು ಸನ್ಮಾನಿಸಿ ಮಾತನಾಡಿದರು.ಇದನ್ನೂ ಓದಿ :  ಕಲ್ಲಡ್ಕ ನೇತಾಜಿ ಸ್ಮೃತಿ ಭವನದಲ್ಲಿ ಜನಾಗ್ರಹ ಸಭೆ ಯ ಪೂರ್ವಭಾವಿ ಸಭೆ
ದಲಿತರು, ರೈತರು, ಕಾರ್ಮಿಕರ ಹಿತಾಸಕ್ತಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ನಾನು ಕಾರ್ಯಕ್ರಮಕ್ಕೆ ಬಂದಿದ್ದೇನೆ. ಹೋರಾಟ ರಾಜಕಾರಣದಲ್ಲಿ ಅತೀ ಅಪರೂಪದ ವ್ಯಕ್ತಿತ್ವ ಮೈಕೆಲ್ ದಂಪತಿಯವರದ್ದಾಗಿದೆ.