ಬಂಟ್ವಾಳ: ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಅನೇಕ ಕಲಾವಿದರಿಗೆ ಬದುಕು ನೀಡುವ ಕಾರ್ಯ ಮಾಡಿದೆ, ಕಲಾವಿದರನ್ನು ಗುರುತಿಸಿ ಗೌರವ ನೀಡಿದೆ, ಸೇವೆಯ ಮೂಲಕ ನಿರ್ಗತಿಕರಿಗೆ ಬಾಳು ನೀಡಿದೆ, ಎಂದು ಶ್ರೀ ಕ್ಷೇತ್ರ ಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ ಹೇಳಿದರು.
ಅವರು ಬಿ.ಸಿ.ರೋಡಿನಲ್ಲಿ ಶ್ರೀ ಮಂಜುವಿಟ್ಲ ಕಲಾ ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು , ಚಿಣ್ಣರ ಲೋಕ ಮೋಕೆದ ಕಲಾವಿದರ್ ಸೇವಾ ಟ್ರಸ್ಟ್ (ರಿ.) ಬಂಟ್ವಾಳ, ಚಿಣ್ಣರಲೋಕ ಸೇವಾ ಬಂಧು (ರಿ.) ಬಂಟ್ವಾಳ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕರಾವಳಿ ಕಲೋತ್ಸವ 2023-24 ಕಾರ್ಯಕ್ರಮದಲ್ಲಿ ಅಶ್ರೀರ್ವಚನ ನೀಡಿ ಮಾತನಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ, ತಾಲೂಕಿನ ಜನರಿಗೆ ಜಾತ್ರೆಯ ಅನುಭವ ನೀಡಲಿ ಎಂದು ಶುಭ ಹಾರೈಸಿದರು.
ಚಿಣ್ಣರ ಅಧ್ಯಕ್ಷೆ ಶ್ರೀನಿಧಿ ಬಿಸಿರೋಡು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಬಿ.ಎಸ್.ಕೂಡಲಗಿ, ಫಾ| ದೀಪಕ್ ಲಿಯೋ ಡೇಸಾ ಮಡಂತ್ಯಾರು, ಮೌಲನ ಅಬ್ದುಲ್ ಅಜೀಜ್ ಧಾರಿಮಿ ಚೊಕ್ಕಬೆಟ್ಟು, ಮಿತ್ತ ಬೈಲು ಮಸೀದಿಯ ಹುಸೇನ್ ಧಾರಿಮಿ, ಚಿಣ್ಣರ ಲೋಕ ರಾಜ್ಯ ಸೌರಭ ಪ್ರಶಸ್ತಿ ಪುರಸ್ಕೃತರಾದ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ, ಅದ್ಯಕ್ಷ ಸುದರ್ಶನ ಜೈನ್, ನ್ಯಾಯವಾದಿ ಜಯರಾಮ ರೈ, ಅಶೋಕ್ ಶೆಟ್ಟಿ, ಸುಕೇಶ್ ಹೆಗ್ಡೆ, ಅ.ಅಶ್ವಿತ್ ಎ.ಜೆ, ಅಭಿಮತ ಟಿ.ವಿ.ಚಾನೆಲ್ ನ ಮಾಲಕಿ ಮಮತಾ ಶೆಟ್ಟಿ, ಫೌಝಿಯಾ ಉಪಸ್ಥಿತರಿದ್ದರು.
ಟ್ರಸ್ಟ್ ನ ಸಂಚಾಲಕ ಮೋಹನ್ ದಾಸ ಕೊಟ್ಟಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾರಾನಾಥ ಕೊಟ್ಟಾರಿ ತೇವು ಸ್ವಾಗತಿಸಿ, ವಂದಿಸಿದರು. ಪ್ರಜ್ವಲ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು.