ಚಿಕ್ಕೋಡಿ: ಬಸ್ ಇಳಿಯುತ್ತಿದ್ದಂತೆ ಯುವಕನ ಮೇಲೆ ದುಷ್ಕರ್ಮಿಗಳು ಮಚ್ಚಿನಿಂದ ದಾಳಿ ನಡೆಸಿ ಕೊಚ್ಚಿ ಕೊಲೆಗೈದ ಪ್ರಕರಣ ಹುಕ್ಕೇರಿ (Hukkeri) ಶಹಾಬಂದರ ಗ್ರಾಮದಲ್ಲಿ ನಡೆದಿದೆ. ಇದನ್ನೂ ಓದಿ :  ಕೃಷ್ಣ ಮೇಲ್ದಂಡೆ ಯೋಜನೆ 3ನೇ ಹಂತ| ಮುಳುಗಡೆ ಸಂತ್ರಸ್ತರಿಗೆ 40 ಲಕ್ಷ ಪರಿಹಾರ

ಗ್ರಾಮದ ಮಹಾಂತೇಶ್ ಬುಕನಟ್ಟಿ (24) ಕೊಲೆಯಾದ ಯುವಕ ಎಂದು ತಿಳಿದು ಬಂದಿದೆ. ಯುವಕ ಕೆಲಸ ಮುಗಿಸಿ ಊರಿಗೆ ವಾಪಸ್ ಆಗಿದ್ದ. ಈ ವೇಳೆ ಬಸ್ ಇಳಿಯುತ್ತಿದ್ದಂತೆ ಹಿಂದಿನಿಂದ ಬಂದು ಮಚ್ಚಿನಿಂದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಇದನ್ನೂ ಓದಿ : ಕುತ್ತಿಗೆಗೆ ಲಾಂಗ್ ಇಟ್ಟು 55 ಗ್ರಾಂ ಚಿನ್ನ ಕಳ್ಳತನ

ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಸ್ಥಳಕ್ಕೆ ಯಮಕನಮರಡಿ (Yemkanmardi) ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.