ಚಿಕ್ಕಬಳ್ಳಾಪುರ: ಲಾಂಗ್ ಮೂಲಕ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಣೆ ಮಾಡಿದ ಆಟೋ ಚಾಲಕನನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ :150 ವರ್ಷದ ಬಳಿಕ ಬೆಂಗಳೂರಿನಲ್ಲಿ ಬೃಹತ್ ಜೈವಿಕ ಉದ್ಯಾನವನ ನಿರ್ಮಾಣ- ಈಶ್ವರ್ ಖಂಡ್ರೆ
ಗೌರಿಬಿದನೂರು ತಾಲೂಕಿನ ವೈಚಕೂರಹಳ್ಳಿ ನಿವಾಸಿ ಆಟೋ ಚಾಲಕ ಅನಿಲ್ ಕುಮಾರ್ ತನ್ನ ಹುಟ್ಟು ಹಬ್ಬದಂದು ಕಿಂಗ್ ಎಂದು ಕೇಕ್ ಮಾಡಿಸಿ ಮಾರಕಾಸ್ತ್ರ ಲಾಂಗ್‌ನಲ್ಲಿ ಕಟ್ ಮಾಡಿ ಬರ್ತ್‌ಡೇ ಆಚರಿಸಿಕೊಂಡಿದ್ದ. ಬಳಿಕ ಆ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಇದನ್ನೂ ಓದಿ :ಕಮಲ್ ಹಾಸನ್‌ಗೆ ಕನ್ನಡದ ಪುಸ್ತಕ ನೀಡಿದ ರಂಜನಿ ರಾಘವನ್
ಈ ವೀಡಿಯೋ ನೋಡಿದ ಗೌರಿಬಿದನೂರು ಗ್ರಾಮಾಂತರ ಪೊಲೀಸರು ಆಟೋ ಚಾಲಕನನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ : ಮಂಡ್ಯದಲ್ಲಿ ನಿರ್ಲಕ್ಷ್ಯಕ್ಕೆ 7 ವರ್ಷದ ಬಾಲಕಿ ಸಾವು ಆರೋಪ – ಮಿಮ್ಸ್ ವೈದ್ಯರ ವಿರುದ್ಧ ಕುಟುಂಬ ಆಕ್ರೋಶ