ಲಿಂಗ ಸಂವೇದನಾ ಘಟಕದ ವತಿಯಿಂದ ಯೆನೆಪೋಯ ( ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ ) ದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು .
ಶ್ರೀಮತಿ ಮೃಣಾಲ್ ಕರ್ಕೇರ, ಅಸೋಸಿಯೇಟ್ ಪ್ರೊಫೆಸರ್, ಸ್ಕೂಲ್ ಆಫ್ ಅಲೈಡ್ ಹೆಲ್ತ್, ಯೆನೆಪೋಯ (ಡೀಮ್ಡ್ ಟು ಯುನಿವರ್ಸಿಟಿ) ಪ್ರಾಸ್ತಾವಿಕವಾಗಿ ಮಾತನಾಡಿ ಸೇರಿದ ಗಣ್ಯರನ್ನು ಸ್ವಾಗತಿಸಿದರು .
ಸೆಲ್ ನ ಕಾರ್ಯದರ್ಶಿಯವರಾದ ಡಾ. ಗ್ಲಾಡೀಸ್ ಆರ್. ಕೊಲಾಸೋ 2023- 24 ರ ವರದಿ ವಾಚಿಸಿದರು .
ಕಾರ್ಯಕ್ರಮದ ಗೌರವ ಅಥಿತಿಗಳಾದ ಡಾ. ಮಜಿ ಜೋಸ್, ಡೀನ್, (ವಿದ್ಯಾರ್ಥಿ ವ್ಯವಹಾರಗಳು) ಮತ್ತು ಪ್ರೊಫೆಸರ್, ಯೆನೆಪೊಯ ಡೆಂಟಲ್ ಕಾಲೇಜ್ ಉತ್ತಮ ಪ್ರಪಂಚಕ್ಕಾಗಿ ಪುರುಷರು ಮತ್ತು ಮಹಿಳೆಯರಲ್ಲಿ ಲಿಂಗ ಸಮಾನತೆಯ ಮಹತ್ವವನ್ನು ಹೇಳಿದರು.
ವರ್ಷದ ಮಹಿಳಾ ಕಾರ್ಮಿಕ ಪ್ರಶಸ್ತಿಯನ್ನುಸುಮಾರು 27 ವರ್ಷ ತಮ್ಮ ಅಮೂಲ್ಯ ಸೇವೆಗಾಗಿ ಶ್ರೀಮತಿ ಸುಜಾತಾ ಶೆಟ್ಟಿ, ಬಯೋಕೆಮಿಸ್ಟ್ರಿ ವಿಭಾಗ ಅವರಿಗೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಡಾ.ಲವೀನಾ ಲೋಬೊ , ಸಮಾಜಕಾರ್ಯ ವಿಭಾಗದ ಸಹಪ್ರಾಧ್ಯಾಪಕಿ ಮತ್ತು ಪಿಜಿ ಕಾರ್ಯಕ್ರಮದ ನಿರ್ದೇಶಕಿ, ಸೇಂಟ್ ಅಲೋಶಿಯಸ್ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಮಂಗಳೂರು ಅವರು ಕುಟುಂಬ ಮತ್ತು ಕೆಲಸದ ಸ್ಥಳಗಳಲ್ಲಿ ಸಮಾನತೆಯನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಎತ್ತಿ ತೋರಿಸಿದರು.
ಲಿಂಗ ಸಂವೇದನೆ ಘಟಕದ ಸಂಚಾಲಕಿ ಡಾ.ಲೀನಾ ಕೆ.ಸಿ ಅಧ್ಯಕ್ಷೀಯ ಭಾಷಣ ಮಾಡಿದರು.
ಯೆನೆಪೋಯ ( ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ ) ದ ಎಲ್ಲ ಅಂಗ ಸಂಸ್ಥೆಗಳು, ಗಣ್ಯರು , ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗ, ಲಿಂಗ ಸಂವೇದನಾ ಘಟಕದ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿ ಬಳಗದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಯೆನೆಪೊಯ ಮೆಡಿಕಲ್ ಕಾಲೇಜಿನ ಮೈಕ್ರೋಬಯಾಲಜಿ ವಿಭಾಗದ ಸಹಪ್ರಾಧ್ಯಾಪಕ ಡಾ ಅಮಲ್ ಲೋಬೋ ಧನ್ಯವಾದ ಸಮರ್ಪಿಸಿದರು.
ರಾಷ್ಟ್ರಗೀತೆ ಹಾಗೂ ವಿದ್ಯಾರ್ಥಿ ಮನೋರಂಜನಾ ಕಾರ್ಯಕ್ರಮಗಳೊಂದಿಗೆ ಮುಕ್ತಾಯಗೊಂಡಿತು .