ಮೆಕ್ಸಿಕೋ: 3,000 ಕಾರುಗಳನ್ನು ಮೆಕ್ಸಿಕೋಗೆ ಸಾಗಿಸುತ್ತಿದ್ದ ಕಾರ್ಗೋ ಶಿಪ್ (ಸರಕು ಸಾಗಣೆ ಹಡಗು – Cargo Ship) ಉತ್ತರ ಪೆಸಿಫಿಕ್ ಸಾಗರದಲ್ಲಿ ಮುಳುಗಡೆಯಾಗಿದೆ. ಹಡಗಿಗೆ ಬೆಂಕಿ ಹೊತ್ತಿಕೊಂಡ ಕೆಲವು ವಾರಗಳ ನಂತರ ಈ ಘಟನೆ ನಡೆದಿದೆ. ಇದನ್ನೂ ಓದಿ : ಆಕ್ಸಿಯಂ-4 ಉಡಾವಣೆ ಯಶಸ್ವಿ – ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳು ಅಂತರಿಕ್ಷ ಪ್ರಯಾಣ
ಮಾರ್ನಿಂಗ್ ಮಿಡಾಸ್ʼ (Morning Midas) ಹೆಸರಿನ ಸುಮಾರು 600 ಅಡಿ ಉದ್ದದ ಕಾರ್ಗೋ ಶಿಪ್ ಹಡಗು ನಿರ್ವಹಣಾ ಕಂಪನಿ ಲಂಡನ್ನ ಜೋಡಿಯಾಕ್ ಮ್ಯಾರಿಟೈಮ್ ನಿರ್ವಹಣೆ ಮಾಡುತ್ತಿತ್ತು. ಹೊಸ ಕಾರುಗಳನ್ನು ಅಲಾಸ್ಕಾದ ಅಡಕ್ ದ್ವೀಪದಿಂದ ಹೊತ್ತು ಮೆಕ್ಸಿಕೋದ ಬಂದರಿಗೆ ಸಾಗುತ್ತಿತ್ತು. ಭೂಪ್ರದೇಶದಿಂದ 300 ಮೈಲುಗಳು (490 ಕಿ.ಮೀ) ದೂರದಲ್ಲಿ ಸಾಗುತ್ತಿದ್ದಾಗ, ಜೂನ್ 3 ರಂದು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.
ತಕ್ಷಣವೇ ಈ ಬಗ್ಗೆ ಹಡಗಿನಲ್ಲಿದ್ದ ಸಿಬ್ಬಂದಿ ಕೋಸ್ಟ್ ಗಾರ್ಡ್ಗೆ ಮಾಹಿತಿ ರವಾನಿಸಿದ್ದರು. ಪ್ರತಿಕೂಲ ಹವಾಮಾನ ಮತ್ತು ನೀರು ಸೋರಿಕೆಯಾದ ಕಾರಣ ಸಿಬ್ಬಂದಿಗೆ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ. ಕಳೆದೊಂದು ವಾರದಿಂದ ಬೆಂಕಿಯಲ್ಲಿ ಉರಿಯುತ್ತಲೇ ಹಡಗು ದಡದತ್ತ ಸಾಗಿ ಬಂದಿದೆ. ಹೀಗಾಗಿ ಹಡಗು ಸಮೇತ 800 ಎಲೆಕ್ಟ್ರಿಕ್ ವಾಹನಗಳೊಂದಿಗೆ ತುಂಬಿದ್ದ 3,000 ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ. ಇದನ್ನೂ ಓದಿ : ಯುವವಾಹಿನಿ ಬಂಟ್ವಾಳ ವತಿಯಿಂದ ಬಿ ತಮ್ಮಯ ನೆನಪಿನ ರಾಜ್ಯ ಮಟ್ಟದ ಸಾಹಿತ್ಯ ಸ್ಪರ್ಧೆಯ ಬಹುಮಾನ ವಿತರಣೆ
ಲಂಡನ್ನ ಜೋಡಿಯಾಕ್ ಮ್ಯಾರಿಟೈಮ್ ಕಂಪನಿ ನೀಡಿದ ಮಾಹಿತಿಯ ಪ್ರಕಾರ, ಹಾನಿಗೀಡಾದ ಹಡಗಿನ ರಕ್ಷಣೆಗೆ ಎರಡು ಹಡಗನ್ನು ರವಾನಿಸಲಾಗಿತ್ತು. ಆದ್ರೆ, ಕೆಟ್ಟ ಹವಾಮಾನದಿಂದಾಗಿ ರಕ್ಷಣೆ ಸಾಧ್ಯವಾಗಿಲ್ಲ. ಸುಮಾರು 16,404 ಅಡಿ (5,000 ಮೀ) ಆಳ ಪ್ರದೇಶದಲ್ಲಿ ಭೂಮಿಯಿಂದ 415 ಮೈಲುಗಳು (770 ಕಿಲೋಮೀಟರ್) ದೂರದಲ್ಲಿ ಹಡಗು ಮುಳುಗಿದೆ ಎಂದು ತಿಳಿಸಿದೆ.