ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ಅವರ ನಿವಾಸದ ಮುಂದೆ ಕಾರಿಗೆ (Car) ಬೆಂಕಿ ಹೊತ್ತಿ ಉರಿದಿದೆ. ಇದರಿಂದ ಸಿಎಂ ನಿವಾಸದ ಮುಂಭಾಗ ಟ್ರಾಫಿಕ್ ಜಾಮ್ ಉಂಟಾಗಿದೆ. ಇದನ್ನೂ ಓದಿ : ಅಮೆರಿಕದಲ್ಲಿ ಪತ್ನಿ, ಮಗನ ಮುಂದೆ ಕರ್ನಾಟಕದ ವ್ಯಕ್ತಿಯ ಶಿರಚ್ಛೇದ – ಮೈ ನಡುಗಿಸುವ ವಿಡಿಯೋ ವೈರಲ್‌

ಈ ಅವಘಡದಲ್ಲಿ ಕಾರಿನಲ್ಲಿದ್ದ ಚಾಲಕ ಹಾಗೂ ಮಾಲೀಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ಬಗ್ಗೆ ಮಾತಾಡಿರುವ ಅವರು, ಕಾರನ್ನು ಆಪ್‍ನಲ್ಲಿ ಬುಕ್ ಮಾಡಿಕೊಂಡಿದ್ದರು. ನಾನು ಚಾಲಕನಾಗಿ ಬಂದಿದ್ದೆ. ಸಿಎಂ ನಿವಾಸದ ಮುಂಭಾಗ ಬರುವಾಗ ಕಾರಿನ ಎಂಜಿನ್ ಭಾಗದಲ್ಲಿ ಹೊಗೆ ಕಾಣಿಸಿಕೊಂಡಿದೆ. ಆಗ ನಾನು ಇಳಿದೆ, ಈ ವೇಳೆ ತಕ್ಷಣ ಬೆಂಕಿ ಹೊತ್ತಿಕೊಂಡಿದೆ ಎಂದಿದ್ದಾರೆ.

2009ರ ಮಾಡೆಲ್‍ನ ಫಿಯೇಟ್ ಕಾರು ಇದಾಗಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಇದನ್ನೂ ಓದಿ : Superfoods for brain: ಈ ಆಹಾರಗಳು ನಿಮ್ಮ ಮೆದುಳನ್ನು ಆರೋಗ್ಯಕರವಾಗಿ, ಸ್ಮರಣಶಕ್ತಿಯನ್ನು ಚುರುಕಾಗಿಡುತ್ತವೆ