ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಉತ್ತರ ಪ್ರದೇಶದ ಆಗ್ರಾದಲ್ಲಿ ಅಂತಾರಾಷ್ಟ್ರೀಯ ಆಲೂಗಡ್ಡೆ ಕೇಂದ್ರದ (ಸಿಐಪಿ) ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರ (ಸಿ.ಎಸ್.ಎ.ಆರ್ ಸಿ.) ಸ್ಥಾಪಿಸುವ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಪ್ರಸ್ತಾವನೆಗೆ ತನ್ನ ಅನುಮೋದನೆ ನೀಡಿದೆ.
ಆಲೂಗಡ್ಡೆ ಮತ್ತು ಗೆಣಸು ಉತ್ಪಾದಕತೆ, ಕಟಾವು ನಂತರದ ನಿರ್ವಹಣೆ ಮತ್ತು ಮೌಲ್ಯವರ್ಧನೆ ಸುಧಾರಿಸುವ ಮೂಲಕ ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆ, ರೈತರ ಆದಾಯ ಮತ್ತು ಉದ್ಯೋಗ ಸೃಷ್ಟಿ ಹೆಚ್ಚಿಸುವುದು ಈ ಹೂಡಿಕೆಯ ಪ್ರಮುಖ ಉದ್ದೇಶವಾಗಿದೆ. ಇದನ್ನೂ ಓದಿ : ಕಲ್ಲಡ್ಕ: ಹೊಸದಾಗಿ ಸೇರ್ಪಡೆಗೊಂಡಂತಹ ವಿದ್ಯಾರ್ಥಿಗಳಿಗೆ ಆಗತ ಸ್ವಾಗತ ಕಾರ್ಯಕ್ರಮ
ಭಾರತದಲ್ಲಿ ಆಲೂಗಡ್ಡೆ ಕ್ಷೇತ್ರವು ಉತ್ಪಾದನಾ ವಲಯ, ಸಂಸ್ಕರಣಾ ವಲಯ, ಪ್ಯಾಕೇಜಿಂಗ್, ಸಾರಿಗೆ, ಮಾರ್ಕೆಟಿಂಗ್, ಮೌಲ್ಯ ಸರಪಳಿ ಇತ್ಯಾದಿಗಳಲ್ಲಿ ಗಮನಾರ್ಹ ಉದ್ಯೋಗಾವಕಾಶ ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ. ಆದ್ದರಿಂದ, ಈ ಕ್ಷೇತ್ರದಲ್ಲಿನ ಬೃಹತ್ ಸಾಮರ್ಥ್ಯ ಬಳಸಿಕೊಳ್ಳಲು ಮತ್ತು ಅನ್ವೇಷಿಸಲು, ಅಂತಾರಾಷ್ಟ್ರೀಯ ಆಲೂಗಡ್ಡೆ ಕೇಂದ್ರದ (ಸಿಐಪಿ) ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರವನ್ನು ಉತ್ತರ ಪ್ರದೇಶದ ಆಗ್ರಾದ ಸಿಂಗ್ನಾದಲ್ಲಿ ಸ್ಥಾಪಿಸಲಾಗುತ್ತಿದೆ. ಸಿ.ಎಸ್.ಎ.ಆರ್.ಸಿ. ಅಭಿವೃದ್ಧಿಪಡಿಸಿದ ಅಧಿಕ ಇಳುವರಿ, ಹೆಚ್ಚಿನ ಪೋಷಕಾಂಶ ಮತ್ತು ಹವಾಮಾನ ಸ್ಥಿತಿಸ್ಥಾಪಕ ಆಲೂಗಡ್ಡೆ ಮತ್ತು ಗೆಣಸಿನ ಪ್ರಭೇದಗಳು ಭಾರತದಲ್ಲಿ ಮಾತ್ರವಲ್ಲದೆ ದಕ್ಷಿಣ ಏಷ್ಯಾ ಪ್ರದೇಶದಲ್ಲಿಯೂ ವಿಶ್ವ ದರ್ಜೆಯ ವಿಜ್ಞಾನ ಮತ್ತು ಆವಿಷ್ಕಾರಗಳ ಮೂಲಕ ಆಲೂಗಡ್ಡೆ ಮತ್ತು ಗೆಣಸು ಕ್ಷೇತ್ರಗಳ ಸುಸ್ಥಿರ ಅಭಿವೃದ್ಧಿಯನ್ನು ಗಮನಾರ್ಹವಾಗಿ ವೇಗಗೊಳಿಸುತ್ತವೆ.