ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸಲು ನಾರಾಯಣ ಗುರುಗಳ ಚಿಂತನೆ ಪ್ರಸ್ತುತವಾದುದು. ಮನೆ ಮನಗಳಲ್ಲಿ ಗುರುಗಳ ಚಿಂತನೆಯನ್ನು ಪಸರಿಸುವ ಮೂಲಕ ಜಾಗೃತ ಸಮಾಜವನ್ನ ರೂಪಿಸಬಹುದು. ಯಾವುದೇ ಮನುಷ್ಯ ಪರಿಪೂರ್ಣನಾಗಲು ಕೇವಲ ಔಪಚಾರಿಕ ನೆಲಯ ಶಿಕ್ಷಣ ಮಾತ್ರವಲ್ಲದೆ ಮಾನವೀಯ ಮೌಲ್ಯಗಳನ್ನ ಕಲಿಸುವ ತತ್ವ ಚಿಂತನೆಗಳು ಕೂಡ ಮುಖ್ಯ. ಸಮಾಜದ ಸ್ವಾಸ್ಥ್ಯವು ಜಾಗೃತ ಸಮಾಜವನ್ನ ನಿರ್ಮಾಣ ಮಾಡುವುದರ ಮೂಲಕ ಕಾಪಾಡಿಕೊಳ್ಳಬಹುದು ಎಂದು ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ತಿಳಿಸಿದರು. ಇದನ್ನೂ ಓದಿ : Plane Crash – ಪತ್ನಿಯ ಕೊನೆಯ ಆಸೆಯನ್ನು ಈಡೇರಿಸಿ ಹಿಂತಿರುಗುವಾಗ ಪತಿ ಸಾವು!
ಅವರು ಬಂಟ್ವಾಳ ಯುವವಾಹಿನಿ ಘಟಕದ ಪ್ರಧಾನ ಕಾರ್ಯದರ್ಶಿ ಚೇತನ್ ಮುಂಡಾಜೆ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 49 ನೇ ಮಾಲಿಕೆಯಲ್ಲಿ ಗುರು ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ಯುವವಾಹಿನಿ ಘಟಕದ ಆರೋಗ್ಯ ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಭಜಕರಾದ ವಿನಯ್ ಆಚಾರ್ಯ, ಮಾಜಿ ಅಧ್ಯಕ್ಷರಾದ ನಾಗೇಶ್ ಪೊನ್ನೊಡಿ, ಪ್ರೇಮನಾಥ್ ಕರ್ಕೇರ, ಶಿವಾನಂದ ಎಂ, ಅರುಣ್ ಮಹಾಕಾಳಿಬೆಟ್ಟು, ಸದಸ್ಯರಾದ ಪ್ರಶಾಂತ್ ಏರಮಲೆ, ಯತೀಶ್ ಬೊಳ್ಳಾಯಿ, ವಿಘ್ನೇಶ್ ಬೊಳ್ಳಾಯಿ, ಹರೀಶ್ ಅಜೆಕಲಾ, ಸಚಿನ್ ಕೊಡ್ಮಾಣ್,ಮೇಘಾ ಚೇತನ್, ಸೂರಜ್ ತುಂಬೆ ಮತ್ತಿತರರು ಉಪಸ್ಥಿತರಿದ್ದರು.
ಮೊದಲಾಗಿ ನಡೆದ ಭಜನಾ ಸಂಕೀರ್ತನಾ ಸೇವೆಯಲ್ಲಿ ಹಾರ್ಮೋನಿಯಂ ವಾದಕರಾಗಿ ರಾಜೇಶ್ ಅಮ್ಟೂರು ಮತ್ತು ತಬಲಾ ದಲ್ಲಿ ಸುದರ್ಶನ್ ಜ್ಯೋತಿಗುಡ್ಡೆ ಸಹಕರಿಸಿದರು.
ಪ್ರದಾನ ಕಾರ್ಯದರ್ಶಿ ಚೇತನ್ ಮುಂಡಾಜೆಯವರು ಸ್ವಾಗತಿಸಿ ವಂದಿಸಿದರು. ಇದನ್ನೂ ಓದಿ : ಅಹಮದಾಬಾದ್ ವಿಮಾನ ದುರಂತದಲ್ಲಿ 241 ಮಂದಿ ಸಾವು, ಪವಾಡ ಸದೃಶವಾಗಿ ಏಕೈಕ ಪ್ರಯಾಣಿಕ ಪಾರು