ಲಯನ್ಸ್ ಕ್ಲಬ್ ಅಮ್ಟೂರು ಹಾಗೂ ದೇವಮಾತಾ ಆಂಗ್ಲ ಮಾಧ್ಯಮ ಶಾಲೆ ಹಾಗೂ ಸಂತ ಅಂತೋನಿಯವರ ಅನುದಾನಿತ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಸಂಪ್ರದಾಯಿಕ ಭತ್ತ ನಾಟಿಯ ಅರಿವು ಕಾರ್ಯಕ್ರಮ ಬೊಳ್ಳಾಯಿ ಚಾಲ್ಸ್ ಪಿರೇರಾ ಅವರ ಗದ್ದೆಯಲ್ಲಿ ನಡೆಸಲಾಯಿತು.
ಸೈಂಟ್ ಜೋಸೆಫ್ ಯುನಿವರ್ಸಿಟಿಯ ಡೀನ್ ಫಾ| ರಿಚ್ಚಾರ್ಡ್ ರೇಗೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಹಿರಿಯರ ಕಾಲದಲ್ಲಿ ಉಪಯೋಗಿಸುತ್ತಿದ್ದ ವಸ್ತುಗಳ ಮಾಹಿತಿ ನೀಡಿ, ಆಗಿನ ಕಾಲದಲ್ಲಿ ಅವರ ಉಪಯೋಗ, ಹಾಗೂ ಅರಿವು ನೀಡಿ ಈಗಿನ ಕಾಲದಲ್ಲಿ ಅದರ ಉಪಯೋಗ ತಿಳಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಗದ್ದೆಯನ್ನು ಉಳುವ ಕಾರ್ಯ ಆರಂಭಿಸಿ, ಉಳುವ ವಿಧಾನ ತಿಳಿಸಿ, ತದನಂತರ ನಾಟಿ ನೆಡುವ ವಿಧಾನವನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ನಾಟಿಯ ಬಗ್ಗೆ ಅರಿವು ಹಾಗೂ ಉಪಯೋಗ ಹಾಗೂ ಹಳ್ಳಿ ಜೀವನದ ಬಗ್ಗೆ ತಿಳಿಯಲು ಅಮೇರಿಕಾದಿಂದ 9 ಮಂದಿ, ಬೆಂಗಳೂರಿನಿಂದ 9 ಹಾಗೂ ಸಂತ ಅಲೋಸಿಯಸ್ ಕಾಲೇಜಿನ 20 ಶಿಕ್ಷಕರು ನಾಟಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.