ದ.ಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಗೆಲುವು. 1,49,208 ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ವಿರುದ್ಧ ಬ್ರಿಜೇಶ್ ಚೌಟ ಗೆಲುವು ಸಾಧಿಸಿದರು.
ಕ್ಯಾ.ಬ್ರಿಜೇಶ್ ಚೌಟ ಅವರು 7,64,132 ಮತ ಮತ್ತು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ 6,14,924 ಮತಗಳನ್ನು ಪಡೆದುಕೊಂಡರು. ಈ ಬಾರಿ 23,576 ಅತೀ ಹೆಚ್ಚಿನ ನೋಟಾ ಮತಗಳು ಬಿದ್ದಿವೆ.
7,032 ಪೋಸ್ಟಲ್ ಮತಗಳು ಸೇರಿ 14,15,770 ಚಲಾವಣೆಯಾದ ಮತಗಳ ಎಣಿಕೆ, 14,08,738 ಇವಿಎಂ ಮತಗಳು ಹಾಗೂ 7,032 ಪೋಸ್ಟಲ್ ಮತಗಳ ಎಣಿಕೆ
ದಕ್ಷಿಣ ಕನ್ನಡ, ಮತ್ತು ಉಡುಪಿಯಲ್ಲಿ ಜಾತಿ ಆದಾರದಲ್ಲಿ ಹಿಂದೂಗಳನ್ನು ಒಡೆಯುವ ಪ್ರಯತ್ನಕ್ಕೆ ಸೋಲಾಯ್ತು….
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ನೂತನ ಸಂಸದರಾಗಿ ಆಯ್ಕೆಯಾದ ಕ್ಯಾ.ಬ್ರಿಜೇಶ್ ಚೌಟ ಅವರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಉಳಿಪ್ಪಾಡಿಗುತ್ತು ಅಭಿನಂದಿಸಿದರು.
ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿ ಮುಲ್ಲೈ ಮುಗಿಲನ್ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು.