ಲಕ್ನೋ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಶಾರ್ಪ್‌ಶೂಟರ್‌ ನವೀನ್ ಕುಮಾರ್‌ನನ್ನು ಉತ್ತರಪ್ರದೇಶ (Uttar Pradesh) ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ.

ಬಿಷ್ಣೋಯ್ ಗ್ಯಾಂಗ್‌ನ (Bishnoi Gang) ಪ್ರಮುಖ ಸದಸ್ಯ, ಗಾಜಿಯಾಬಾದ್‌ನ ಲೋನಿ ನಿವಾಸಿ ನವೀನ್ ಕುಮಾರ್‌ನನ್ನು ಬುಧವಾರ ತಡರಾತ್ರಿ ಹಾಪುರ್‌ನ ಥಾನಾ ಕೊಟ್ವಾಲಿ ಪ್ರದೇಶದಲ್ಲಿ ಉತ್ತರಪ್ರದೇಶ ಪೊಲೀಸರು ಎನ್‌ಕೌಂಟರ್ ಮಾಡಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ :  ಮೇ 3 ಅಂತರರಾಷ್ಟ್ರೀಯ ಕಾಡು ಕೋಲಾ ದಿನ

ಕೊತ್ವಾಲಿಯಲ್ಲಿ ಬಿಷ್ಣೋಯ್ ಗ್ಯಾಂಗ್ ಇರುವ ಖಚಿತ ಮಾಹಿತಿಯನ್ನಾಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಬಿಷ್ಣೋಯ್ ಗ್ಯಾಂಗ್ ಪೊಲೀಸರ ಮೇಲೆ ಪ್ರತಿದಾಳಿ ಮಾಡಿದ್ದರು. ಇದರಲ್ಲಿ ಗ್ಯಾಂಗ್‌ನ ಶಾರ್ಪ್‌ಶೂಟರ್‌ ನವೀನ್ ಕುಮಾರ್‌ಗೆ ಗಂಭೀರ ಗಾಯಗಳಾಗಿದದವು. ಆತನ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನವೀನ್ ಮೇಲೆ ದೆಹಲಿಯ ಥಾನಾ ಫರ್ಶ್ ಬಜಾರ್‌ನಲ್ಲಿ ಕೊಲೆ ಸೇರಿ 20ಕ್ಕೂ ಪ್ರಕರಣ ದಾಖಲಾಗಿದ್ದವು. ಈ ಹಿಂದೆ ದೆಹಲಿಯಲ್ಲಿ ಪ್ರಕರಣದಲ್ಲಿ ನವೀನ್ ಜೈಲು ಶಿಕ್ಷೆ ಅನುಭವಿಸಿದ್ದ. ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ, ನೋಯ್ಡಾ ಘಟಕ ಮತ್ತು ದೆಹಲಿ ಪೊಲೀಸರ ವಿಶೇಷ ಘಟಕದ ಜಂಟಿ ತಂಡಗಳು ಸೇರಿ ಕಾರ್ಯಾಚರಣೆ ಮಾಡಿದೆ. ಇದನ್ನೂ ಓದಿ : World Otter Day ಮೇ 27 ವಿಶ್ವ ನೀರುನಾಯಿ ದಿನ