ಬಿಲ್ಲವ ಸಂಘ (ರಿ) ಕುಂಡಡ್ಕ ಬಂಟ್ವಾಳ ತಾಲೂಕು ವಿಟ್ಲ ಮೂಡ್ನೂರು ಕುಳ ಗ್ರಾಮ ಇದರ ಮಹಾಸಭೆಯ ಬ್ರಹ್ಮಶ್ರೀ ನಾರಾಯಣ ಗುರುದೇವ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷರಾದ ದೂಮಪ್ಪ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು .
ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ನಾರಾಯಣ ಎಸ್ .ಕೆ., ಅಧ್ಯಕ್ಷರಾಗಿ ವಿನೋದ್ ಕುಮಾರ್ ಮಾಡತ್ತಡ್ಕ ಆಯ್ಕೆಗೊಂಡರು.
ಉಪಾಧ್ಯಕ್ಷರಾಗಿ ಶ್ರೀನಿವಾಸ ಕೊಪ್ಪಳ ಮತ್ತು ಶೋಭಾ ಸಿಪಿಸಿಆರ್ ಐ, ಪ್ರಧಾನ ಕಾರ್ಯದರ್ಶಿ ಚೇತನ್ ಮರುವಾಳ, ಜೊತೆ ಕಾರ್ಯದರ್ಶಿ ಪ್ರಸಾದಿನಿ ಎ., ಕೋಶಾಧಿಕಾರಿ ರಾಜೇಶ್ ಹೊಯಿಗೆ, ಸಂಘಟನಾ ಕಾರ್ಯದರ್ಶಿ ದೀಕ್ಷಿತ್ ಮಾಡತ್ತಡ್ಕ, ಸಂಘಟನಾ ಕಾರ್ಯದರ್ಶಿ ರೋಹಿಣಿ ಹೊಯ್ಗೆ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಜನಾರ್ಧನ ಪೆರುವಾಜೆ, ದಯಾನಂದ ಕುಕ್ಕುದಡ್ಕ, ಗಂಗಾಧರ ನೀರ ಕೋಡಿ, ಸುನೀತಾ ಕಾರ್ಯಾಡಿ, ನಿರ್ಮಲ ಕಾರ್ಯಾಡಿ, ಸಲಹೆಗಾರರಾಗಿ ಧೂಮಪ್ಪ ಪೂಜಾರಿ ಪೆರುವಾಜೆ, ಸುಂದರ ಪೂಜಾರಿ ಕೇದಗೆದಡಿ, ನಾರಾಯಣ ಎಸ್ ಪೂಜಾರಿ, ಕೆ. ಟಿ. ಆನಂದ, ಯತೀಶ್ ಬೇರಿಕೆ, ನಾರಾಯಣ ಪಿ. ಸಿ., ಬಾಬು ಬಂಗೇರ, ನಾರಾಯಣ ಪಿಲಿಂಜ, ಹೊನ್ನಪ್ಪ ಪೂಜಾರಿ, ಸಂಜೀವ ಪೂಜಾರಿ ಕೇದಗೆದಡಿ, ಕೃಷ್ಣಪ್ಪ ಪೂಜಾರಿ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮವನ್ನು ಕೆ.ಟಿ.ಆನಂದ ನಿರೂಪಿಸಿ, ಸ್ವಾಗತಿಸಿದರು. ಸುಂದರ ಪೂಜಾರಿ ವಂದಿಸಿದರು.