ಪರ್ಯಾಯ ಪೂರ್ವಭಾವಿಯಾಗಿ ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಕರಂಬಳ್ಳಿ ಶ್ರೀ ವೇಂಕಟರಮಣ ದೇವಸ್ಥಾನಕ್ಕೆ
ಆಗಮಿಸಿ ಕೋಟಿ ಗೀತಾಭಿಯಾನದ ಮೂಲಕ ವಿಶ್ವಗೀತಾ ಪರ್ಯಾಯೋತ್ಸವವನ್ನು ಸಂಕಲ್ಪಿಸಿರುವುದರ ದ್ಯೋತಕವಾಗಿ ಶ್ರೀ ಮಠದ ಪಟ್ಟದ ದೇವರು ಮತ್ತು ಭಗವದ್ಗೀತೆ
ಗ್ರಂಥಗಳನ್ನು ಸಾಲಂಕೃತ ಬೆಳ್ಳಿ ಪಲ್ಲಕ್ಕಿಯಲ್ಲಿಟ್ಟು ಮಂಗಳರಾತಿ ಬೆಳಗಿ, ಚಂಡೆ ವಾದ್ಯ ಭಜನೆ ಸಹಿತ ದೇವಳದ ಆವರಣದಲ್ಲಿ ಭಗವದ್ಗೀತೋತ್ಸವ ನೆರವೇರಿಸಿದರು.