ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ ) ಬಂಟ್ವಳ ತಾಲೂಕಿನ ಪೊಳಲಿ ವಲಯದ ಬೆಂಜನಪದವು ಕಾರ್ಯಕ್ಷೇತ್ರದ ಶ್ರಿ ದುರ್ಗಾ ಜ್ಞಾನವಿಕಾಸ ಕೇಂದ್ರಲ್ಲಿ ಪೌಷ್ಟಿಕ ಆಹಾರ ಮೇಳ ಕಾರ್ಯಕ್ರಮ ಆದಿತ್ಯವಾರ ನಡೆಸಲಾಯಿತು.
ಸಾಂತ್ವನ ಕೇಂದ್ರದ ಕೌನ್ಸಿಲರ್ ವಿದ್ಯಾ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಪೌಷ್ಟಿಕ ಆಹಾರ ಸೇವನೆಯಿಂದ ಆಗುವ ಉಪಯೋಗಗಳ ಬಗ್ಗೆ ಹಾಗೂ ಅದರ ಅನುಷ್ಠಾನಗಳ ಬಗ್ಗೆ ಮಾಹಿತಿ ಮಾರ್ಗದರ್ಶನವನ್ನು ನೀಡಿದರು. ಜ್ಞಾನವಿಕಾಸ ಕೆಂದ್ರದ ಸದಸ್ಯರು ಪೌಸ್ಟಿಕ ಮೊಳಕೆ ಕಾಳು, ಸೊಪ್ಪು ತರಕಾರಿ ಹಾಗೂ ಪೌಷ್ಟಿಕ ಆಹಾರ ತಮ್ಮ ತಮ್ಮ ಮನೆಯಲ್ಲಿ ತಯಾರಿಸಿ ತಂದು ಪ್ರದರ್ಶನ ಮಾಡಿ ಆ ಆಹಾರ ಸೇವನೆ ಇಂದ ಆಗುವ ಪ್ರಯೋಜನ ತಿಳಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಪೊಳಲಿ ವಲಯ ಮೇಲ್ವಿಚಾರಕಿ ಹರಿಣಾಕ್ಷಿ, ವಲಯದ ಮಾಜಿ ಅಧ್ಯಕ್ಷ ಗ್ರಾಮ ಪಂಚಾಯತ್ ಸದಸ್ಯರಾದ ವಾಮನ ಆಚಾರ್ಯ, ಜ್ಞಾನವಿಕಾಸ ಸಮನ್ವಯಧಿಕಾರಿ ಶ್ರುತಿ, ಉಪಸ್ಥಿತರಿದ್ದರು. ಶೌರ್ಯತಂಡದ ಸದಸ್ಯರು, ಜ್ಞಾನವಿಕಾಸ ಕೇಂದ್ರದ ಸದಸ್ಯರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು.
ಜಯಲಕ್ಷ್ಮಿ ಪ್ರಾರ್ಥಿಸಿ, ಉಷಾ ಸ್ವಾಗತಿಸಿ, ಸೇವಾಪ್ರತಿನಿಧಿ ರತ್ನ ವಂದಿಸಿ, ಕಾರ್ಯಕ್ರಮ ನೀರೂಪಿಸಿದರು.