ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದ್ದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿರುದ್ಧವೂ ದೂರು ದಾಖಲಾಗಿದೆ.
ಕೊಹ್ಲಿ ವಿರುದ್ಧ ನೈಜ್ಯ ಹೋರಾಟಗಾರರ ಸಂಘ ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದೆ. ದೂರಿನಲ್ಲಿ, ಈ ನೂಕು ನುಗ್ಗಲಿಗೆ ಕೊಹ್ಲಿ ಸಹ ಕಾರಣ ಎಂದು ಆರೋಪಿಸಲಾಗಿದೆ. ಅಲ್ಲದೇ ದುರಂತ ನಡೆದ ಕುಟುಂಬವನ್ನು ಕೊಹ್ಲಿ ಭೇಟಿ ಮಾಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ :ಚಿಕ್ಕಬಳ್ಳಾಪುರ | ಇಬ್ಬರು ಮಕ್ಕಳೊಂದಿಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ
ಈ ಹಿಂದೆ ಅಲ್ಲು ಅರ್ಜುನ್ ಸಿನಿಮಾ ಸಂದರ್ಭದಲ್ಲಿ ದುರಂತಕ್ಕೆ ನಟ ಕಾರಣ ಎಂದು ಬಂಧಿಸಲಾಗಿತ್ತು. ಈಗ ವಿರಾಟ್ ನೋಡೋದಕ್ಕೆ ಇಷ್ಟೊಂದು ಜನ ಪ್ರಮುಖವಾಗಿ ಸೇರಿದ್ದರು. ಹೀಗಾಗಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಬೆಂಗಳೂರಿನಲ್ಲಿ ಸೆಲಬ್ರೇಷನ್ ತರಾತುರಿಯಲ್ಲಿ ನಡೆಯಿತು. ಇದಕ್ಕೆ ಕೊಹ್ಲಿ ಒತ್ತಡವೇ ಕಾರಣ. ವಿದೇಶ ಪ್ರವಾಸ ಇರೋದ್ರಿಂದ ಅವರು ಸೆಲೆಬ್ರೇಷನ್ ಬೇಗ ನಡೆಸುವವಂತೆ ಒತ್ತಡ ಹೇರಿರುವ ಸಾಧ್ಯತೆ ಇದೆ. ಇಲ್ಲಿ ಮುಗಿಯುತ್ತಿದ್ದಂತೆ ಕೊಹ್ಲಿ ಲಂಡನ್‌ಗೆ ಹೋಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ :ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ – ವಂದೇ ಭಾರತ್ ರೈಲಿಗೂ ಚಾಲನೆ
ಕೊಹ್ಲಿ ವಿರುದ್ಧದ ದೂರಿನ ಪ್ರತಿಯಲ್ಲಿ, ಸ್ವೀಕರಿಸಲಾಗಿದೆ ಎಂದು ಪೊಲೀಸರು ಹಿಂಬರಹ ನೀಡಿದ್ದಾರೆ.