ಬೆಂಗಳೂರು: ರಸ್ತೆಬದಿ ನಿಂತಿದ್ದ ವಾಹನಕ್ಕೆ ತಡರಾತ್ರಿ ನೇಣು ಯುವಕ (Youth) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು (Bengaluru) ಉತ್ತರ ತಾಲೂಕಿನ ಚಿಕ್ಕಗೊಲ್ಲರಹಟ್ಟಿಯಲ್ಲಿ ನಡೆದಿದೆ.

ನವೀನ್ (30) ಆತ್ಮಹತ್ಯೆಗೆ ಶರಣಾದ ಯುವಕ. ನವೀನ್ ಮೊದಲಿಗೆ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ರಕ್ತ ಸ್ರಾವವಾಗಿದ್ದರೂ ಸಾವನ್ನಪ್ಪದ ಹಿನ್ನೆಲೆ ರಸ್ತೆಬದಿ ನಿಂತಿದ್ದ ವಾಹನಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಇದನ್ನೂ ಓದಿ : ಬ್ಯಾಂಕಾಕ್ ಫುಡ್ ಮಾರ್ಕೆಟ್‌ನಲ್ಲಿ ಗುಂಡಿನ ದಾಳಿಗೆ 6 ಬಲಿ

ನವೀನ್ ಈ ಹಿಂದೆ ಅಪಘಾತದಲ್ಲಿ ಕಾಲು ಮುರಿದುಕೊಂಡಿದ್ದ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಆತ್ಮಹತ್ಯೆಗೆ ಕಾರಣ ಏನು ಎಂಬುದನ್ನು ಪೊಲೀಸರು ಪತ್ತೆಮಾಡುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ : ಚಿತ್ರದುರ್ಗ | ಸಹೋದರನಿಗೆ HIV – ಕುಟುಂಬದ ಮರ್ಯಾದೆಗೆ ಅಂಜಿ ತಮ್ಮನನ್ನೇ ಕೊಲೆಗೈದ ಅಕ್ಕ