ಬಂಟ್ವಾಳ; ವಿಧಾನ ಪರಿಷತ್ ಸದಸ್ಯರ ಐವನ್ ಡಿ.ಸೋಜ ಅವರ ದೇಶದ್ರೋಹದ ಹೇಳಿಕೆ ಹಾಗೂ ರಾಜ್ಯಪಾಲರ ವಿರುದ್ದ ಅವ್ಯಾಚ್ಚ ಶಬ್ದಗಳ ಬಳಕೆಯ ವಿರುದ್ಧ ಯುವ ಮೋರ್ಚಾವು ಠಾಣೆಗೆ ದೂರು ನೀಡಿದರೂ, ಎಫ್.ಐ.ಆರ್ ದಾಖಲಿಸಲು ವಿಳಂಬ ನೀತಿ ಅನುಸರಿಸುವ ಪೋಲೀಸ್ ಇಲಾಖೆ ಹಾಗೂ ರಾಜ್ಯ ಕಾಂಗ್ರೆಸ್ ನ ವಿರುದ್ಧ ಬಂಟ್ವಾಳ ಬಿಜೆಪಿ ಯುವಮೋರ್ಚಾ ವತಿಯಿಂದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದಲ್ಲಿ ಬಿಸಿರೋಡಿನಲ್ಲಿ ಬೃಹತ್ ಪ್ರತಿಭಟನೆ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆ ನಡೆಯಿತು.
ವಿಕಾಶ್ ಪುತ್ತೂರು ಮಾತನಾಡಿ ಸಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡುವ ಕಾಂಗ್ರೇಸ್ ನಾಯಕರೇ , ಬಿಜೆಪಿಯ ಕಾರ್ಯಕರ್ತರು ಮನಸ್ಸು ಮಾಡಿದರೆ ಮುಖ್ಯಮಂತ್ರಿ ಕಚೇರಿಯೊಳಗೆ ನುಗ್ಗಿ ಎಳೆದುಕೊಂಡು ಬರುವ ತಾಕತ್ ಇದೆ ಎಂಬ ಮಾತನ್ನು ಉಲ್ಲೇಖ ಮಾಡಿದರು.
ಸಿದ್ದರಾಮಯ್ಯ ಒಬ್ಬ ಆಯೋಗ್ಯ ಮುಖ್ಯಮಂತ್ರಿ , ಐವನ್ ಡಿ.ಸೋಜ ಅಯೋಗ್ಯನ ಚೇಲಾಗಳು ಎಂದು ಆರೋಪ ಮಾಡಿದರು.ಒಬ್ಬ ರಾಜಕಾರಣಿ ಹೇಗಿರಬಾರದು ಮತ್ತು ಯಾವ ರೀತಿ ಬಕೆಟ್ ಹಿಡಿಯಬಹುದು ಎಂಬುದಕ್ಕೆ ಐವನ್ ಡಿ.ಸೋಜ ಒಬ್ಬ ನಿದರ್ಶನ ಎಂದು ಹೇಳಿದರು. ಭಯೋತ್ಪಾದಕ ಸಂಘಟನೆ ಎಸ್.ಡಿ.ಪಿ.ಜೊತೆ ಸೇರಿ ಅಧಿಕಾರ ನಡೆಸುವ ಸ್ಥಿತಿ ಕಾಂಗ್ರೆಸ್ ಗೆ ಬಂದಿದ್ದು, ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರಿಗೆ ತಮ್ಮ ಸ್ಥಾನದಲ್ಲಿ ಮುಂದುವರಿಯುವ ಯಾವುದೇ ನೈತಿಕತೆಯಿಲ್ಲವಾಗಿದೆ ಎಂದು ಆರೋಪಿಸಿದರು.
ಬಂಟ್ವಾಳ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಬಂಟ್ವಾಳ ಯುವ ಮೋರ್ಚಾದ ಆಧ್ಯಕ್ಷ ದಿನೇಶ್ ಶೆಟ್ಟಿ ದಂಬೆದಾರ್ ಹಾಗೂ ಜಿಲ್ಲಾ ಪದಾಧಿಕಾರಿಗಳು, ಹಿರಿಯ ನಾಯಕರುಗಳು , ಮಂಡಲ ಪದಾಧಿಕಾರಿಗಳು, ಮೋರ್ಚಾದ ಪದಾಧಿಕಾರಿಗಳು, ಪ್ರಕೋಷ್ಟದ ಸಂಚಾಲಕರು,ಶಕ್ತಿಕೇಂದ್ರದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಸಂಪತ್ ಕುಮಾರ್ ಸ್ವಾಗತಿಸಿ, ವಂದಿಸಿದರು.