ಬೀದರ್’ನ ಚಿಟ್ಟಾವಾಡಿಯಲ್ಲಿ ರಾಷ್ಟ್ರೀಯ ಬಸವದಳ ಹಾಗೂ ಶರಣ ಬಂಧುಗಳು ನಿರ್ಮಿಸಿರುವ ವಿಶ್ವಗುರು ಬಸವಣ್ಣನವರ ಅಶ್ವರೂಢ ಮೂರ್ತಿ ಹಾಗೂ ಜಗನ್ಮಾತೆ ಅಕ್ಕಮಹಾದೇವಿಯವರ ಮೂರ್ತಿ ಅನಾವರಣ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾಗವಹಿಸಿ ಪುತ್ಥಳಿ ಅನಾವರಣಗೊಳಿಸಿದರು.

ವಿಶ್ವ ಗುರು ಬಸವೇಶ್ವರರು ಸಾರಿದ ಶ್ರೇಷ್ಠ ಕಾಯಕ ತತ್ವಗಳು ಹಾಗೂ ಸ್ತ್ರೀ ಸಮಾನತೆ ಸಾರಿದ ಅಕ್ಕಮಹಾದೇವಿ ಅವರುಗಳ ಪ್ರೇರಣೆಯ ಸಂದೇಶಗಳನ್ನು ಅಳವಡಿಸಿಕೊಂಡು ಸಾಗಬೇಕೆಂಬ ಮನವಿ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪರಮಪೂಜ್ಯ ನಡೋಜಾ ಡಾ.ಬಸವಲಿಂಗ ಪಟ್ಟದೇವರು, ಪರಮಪೂಜ್ಯ ಜಗದ್ಗುರು ಸಿದ್ದರಾಮೇಶ್ವರ ಶ್ರೀಗಳು, ಪರಮಪೂಜ್ಯ ಗುರು ವಿಜಯಮಾಂತೇಶ್ವರ ಶಿವಾಚಾರ್ಯ ಶ್ರೀಗಳು ದಿವ್ಯ ಸಾನಿಧ್ಯ ವಹಿಸಿ, ಕೇಂದ್ರದ ರಾಜ್ಯ ಖಾತೆ ಸಚಿವರಾದ ಶ್ರೀ @bhagwantkhuba, ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಶ್ರೀ ಶೈಲೇಂದ್ರ ಬೆಲ್ದಾಳೆ, ಜಿಲ್ಲಾಧ್ಯಕ್ಷರಾದ ಶ್ರೀ ಸೋಮನಾಥ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ರಘುನಾಥ ಮಲ್ಕಾಪುರೆ ಅವರು ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.