ಬಂಟ್ವಾಳ: ಖಾದಿ ಗ್ರಾಮೋದ್ಯೋಗಕ್ಕೆ ಪ್ರಾಮುಖ್ಯತೆ ನೀಡಿ ಗ್ರಾಮೀಣ ಜನರ ಹಾಗೂ ಗೃಹ ಕೈಗಾರಿಕೆಗಳಿಗೆ ಬಲನೀಡಿದಲ್ಲಿ ದೇಶದಆರ್ಥಿಕತೆಗೆ ಬಲ ನೀಡಿದಂತಾಗುತ್ತದೆ ಎಂಬ ಮಹಾತ್ಮ ಗಾಂಧಿಯವರ ಆಶಯವನ್ನು ಪಾಲಿಸಬೇಕಾದ ಅಗತ್ಯತೆ ಇದೆ ಎಂದು ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಶ್ರೀ ಶಿವಣ್ಣ ಪ್ರಭು ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು, ವಿದ್ಯಾಗಿರಿ ಬಂಟ್ವಾಳ ಇಲ್ಲಿ ಎನ್.ಎಸ್.ಎಸ್. ಘಟಕದ ವತಿಯಿಂದ ಆಯೋಜಿಸಿದ್ದ ಮಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆಶಯ ನುಡಿಗಳನ್ನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಸುಯೋಗ ವರ್ಧನ್‌ಡಿ.ಎಮ್. ಅವರು ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಆನಂದವುಂಟಾಗುತ್ತದೆ. ಮನುಷ್ಯನಾದವನು ಜೀವನದಲ್ಲಿ ಸೇವಾಮನೋಭಾವವನ್ನು ಬೆಳಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್.ವಿ.ಎಸ್. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುದರ್ಶನ್ ಬಿ ಅವರು ಮಾತನಾಡಿ ಮಹಾತ್ಮಗಾಂಧಿಜಿಯವರ ವ್ಯಕ್ತಿತ್ವ ಎಲ್ಲಾ ವಯೋಮಾನದವರಿಗೂ ಆಕರ್ಷಣೀಯವಾದುದು. ಹಾಗಾಗಿಯೇ ಅವರನ್ನು ಗಾಂಧಿತಾತ, ಬಾಪೂಜಿ, ಮಹಾತ್ಮಗಾಂಧಿ ಎಂದು ಹಲವು ಹೆಸರುಗಳಿಂದ ಕರೆಯಲಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ರಾ.ಸೇ.ಯೋ.ಕಾರ್ಯಕ್ರಮಾಧಿಕಾರಿ ಡಾ.ಕಾಶೀನಾಥ ಶಾಸ್ತ್ರಿ ಹೆಚ್.ವಿ. ಇವರು ಸ್ವಾಗತಿಸಿ, ಉಪನ್ಯಾಸಕರಾದ ಶ್ರೀ ಲಕ್ಷö್ಮಣ್ ವಂದಿಸಿದರು. ಶ್ರೀ ಮನೋಹರ್ ಎಸ್‌ದೊಡ್ಡಮನಿ ನಿರೂಪಿಸಿ ಕು.ಹೇಮಲತಾ ಪ್ರಾರ್ಥಿಸಿದರು.

ಕಾರ್ಯಕ್ರಮದ ನಂತರ ‘ಸ್ವಚ್ಛತಾ ಹಿ ಸೇವಾ’ ಯೋಜನೆಯಡಿಯಲ್ಲಿಎನ್.ಎಸ್.ಎಸ್. ಸ್ವಯಂಸೇವಕರುಕಾಲೇಜು ಪರಿಸರವನ್ನು ಸ್ವಚ್ಛಗೊಳಿಸಿದರು.