ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯು ಜೂನ್ 18ರಂದು ನಡೆಯಿತು.

ಪ್ರಾಂಶುಪಾಲೆ ಶ್ರೀಮತಿ ಜೂಲಿ ಟಿ.ಜೆ ಹಾಗೂ ಉಪಪ್ರಾಂಶುಪಾಲೆ ಶ್ರೀಮತಿ ಪೂರ್ಣೇಶ್ವರಿ ಭಟ್ ಅವರ ನೇತೃತ್ವದಲ್ಲಿ, ಮುಖ್ಯ ಚುನಾವಣಾಧಿಕಾರಿ ಶ್ರೀಮತಿ ನಮಿತಾಂಜಲಿ ಅವರ ಮಾರ್ಗದರ್ಶನದಂತೆ, ಶಿಕ್ಷಕಿಯರಾದ ಸಿರಿಷಾ ನೀಲಂ, ಹರ್ಷಿತಾ ಬಿ., ವಸಂತಿ ಹಾಗೂ ಹರೀಶ್ ಆಚಾರ್ಯ ಕರ್ತವ್ಯ ನಿರ್ವಹಿಸಿದರು.

ಆರನೇ ತರಗತಿಯಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳು ಮತ ಚಲಾಯಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀಮತಿ ಸುರೇಖಾ ಎಸ್. ರೈ ಅವರ ನೇತೃತ್ವದಲ್ಲಿ ಮತ ಎಣಿಕೆಗೊಂಡು, ಶಾಲಾನಾಯಕನಾಗಿ ಕೀತ್ ಈವನ್ ಅಲ್ವಾರೀಸ್ ಹಾಗೂ ಉಪನಾಯಕಿಯಾಗಿ ಚಿನ್ಮಯಿ ಶೆಟ್ಟಿ ಆಯ್ಕೆಯಾದರು. ವಿಜೇತರನ್ನು ಶಾಲಾ ಪ್ರಾಂಶುಪಾಲರು ಅಭಿನಂದಿಸಿದರು.