ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ ) ಬಂಟ್ವಾಳ ತಾಲೂಕಿನ ಬಂಟ್ವಾಳ ವಲಯದ ನೇತ್ರಾವತಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ ರೋಹಿಣಿ ಅವರ ಮನೆಯಲ್ಲಿ ಜರುಗಿತು.

ತಾಲೂಕಿನ ಯೋಜನಾಧಿಕಾರಿ ಜಯಾನಂದ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿ ಜ್ಞಾನವಿಕಾಸ ಕಾರ್ಯಕ್ರಮವು 40 ವರ್ಷದಿಂದ ಪ್ರಾರಂಭವಾಗಿದೆ. ಜ್ಞಾನವಿಕಾಸ ಕೇಂದ್ರ ಬೆಳ್ತಂಗಡಿ ತಾಲೂಕಿನಲ್ಲಿ ಪ್ರಾರಂಭಆಗಿ ಇಡೀ ಕರ್ನಾಟಕ ರಾಜ್ಯದಲ್ಲಿ ಪಸರಿಸಿದೆ. ಜ್ಞಾನವಿಕಾಸ ಕಾರ್ಯಕ್ರಮಗಳು ಮಹಿಳೆಯರಲ್ಲಿ ಆಗುವ ಬದಲಾವಣೆ ಗಳ ಬಗ್ಗೆ ಮಾಹಿತಿ ನೀಡಿದರು. ಹಾಗೂ ಯೋಜನೆ ಯ ಹಲವಾರು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ವಿವೇಕಾನಂದ ಯುವಕ ಸಂಘದ ಸ್ಥಾಪಕ ಅಧ್ಯಕ್ಷ ಶ್ರಿ ಮಚ್ಚೆಂದ್ರ ಸಾಲಿಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮ ಬಹಳ ಉತ್ತಮವಾಗ ಕಾರ್ಯಕ್ರಮ, ಎಲ್ಲರೂ ಒಟ್ಟಿಗೆ ಭೇದ ಭಾವ ಇಲ್ಲದೆ ಜೀವನ ಮಾಡುವ ಸಂಸ್ಥೆ ಎಂದರೆ ಗ್ರಾಮಾಭಿವೃದ್ಧಿ ಯೋಜನೆ ಎಂದು ತಿಳಿಸಿದರು.

ಜನಜಾಗೃತಿ ಸದಸ್ಯ ಸದಾನಂದ ಅವರು ಜ್ಞಾನ ವಿಕಾಸ ಕೇಂದ್ರ ಅಂದರೆ ನಮ್ಮ ಬದುಕನ್ನು ಬದಲಿಸುವ ಕಾರ್ಯಕ್ರಮ ಎಂದರು. ಬೇರೆ ಬೇರೆ ಸಂಪನ್ಮೂಲ ವ್ಯಕ್ತಿ ಗಳಿಂದ ಸಿಗುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ ಎಂದು ತಿಳಿಸಿದರು.

ಕಸಬಾ ಸಿ. ಒಕ್ಕೂಟ ಅಧ್ಯಕ್ಷ ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ದೂಮವತಿ ಕಲ್ಲುರ್ಟಿ ದೈವಸ್ಥಾನದ ಅಧ್ಯಕ್ಷ ಗಂಗಾಧರ ಸಾಲಿಯಾನ್, ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ದಿನೇಶ್ ಪೂಜಾರಿ, ಪುರಸಭೆ ಸದಸ್ಯೆ ಮೀನಾಕ್ಷಿ, ಮಹಮ್ಮಾಯಿ ದುರ್ಗಂಬ ಮಹಿಳಾ ಸಮಿತಿಯ ರಾಗಿಣಿ, ಮೂಡನಡುಗೋಡು ಒಕ್ಕೂಟ ಅಧ್ಯಕ್ಷರು ಭಾಸ್ಕರ್, ಮನೆಯ ಯಜಮಾನ ಕೇಶವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಲಯದ ಮೇಲ್ವಿಚಾರಕರು ರೂಪ ರೈ, ಆಂತರಿಕ ಲೆಕ್ಕಪರೀಶೋದಕರು ರಾಜೇಶ್, ನವಜ್ಯೋತಿ ಕೇಂದ್ರ ಸದಸ್ಯರು, ಸೇವಾಪ್ರತಿನಿಧಿ ಸಂಪ, ಸುನಿತಾ, ಉಷಾ vle ವಸಂತಿ, ಒಕ್ಕೂಟ ಅಧ್ಯಕ್ಷರು ಪದಾಧಿಕಾರಿಗಳು ಊರಿನ ಗಣ್ಯರು ಉಪಸ್ಥಿತರಿದ್ದರು.

ನೇತ್ರವತಿ ಕೇಂದ್ರದ ಸದಸ್ಯೆ ಚಂದ್ರವತಿ ಅನಿಸಿಕೆ ವ್ಯಕ್ತಪಡಿಸಿದರು.

ಸೇವಾಪ್ರತಿನಿಧಿ ಪ್ರಪುಲ್ಲ ಸ್ವಾಗತಿಸಿ, ಸೇವಾಪ್ರತಿನಿಧಿ ರೋಹಿಣಿ  ವರದಿ ವಾಚಿಸಿ, ವಂದಿಸಿದರು. ಸಮನ್ವಯಧಿಕಾರಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು.