ಬಂಟ್ವಾಳ ಪುರಸಭಾ ವ್ಯಾಪ್ತಿಯ ಹೊಸ್ಮಾರಿನಲ್ಲಿ ಮನೆಯ ಅಂಗಳ ಮುಂಭಾಗದ ತಡೆಗೋಡೆಯೊಂದು ಕುಸಿದು ಬಿದ್ದ ಘಟನೆ ಗುರುವಾರ ಮುಂಜಾನೆ ನಡೆದಿದ್ದು, ಘಟನಾ ಸ್ಥಳಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರ್ಧ ಭಾಗದ ತಡೆಗೋಡೆ ಕುಸಿದಿದ್ದು, ಉಳಿದ ಅರ್ಧ ಭಾಗದ ತಡೆಗೋಡೆ ಕುಸಿದು ಬೀಳವ ಹಂತದಲ್ಲಿದೆ. ಘಟನೆಯಿಂದ ಮನೆಯ ಅಂಗಳ ಬಹುತೇಕ ಕುಸಿದಿದ್ದು, ಮನೆ ಅಪಾಯಕ್ಕೆ ಸಿಲುಕಿದೆ.
ಇಲ್ಲೇ ಸಮೀಪದ ದೈವಗುಡ್ಡೆ ಎಂಬಲ್ಲಿ ಅವರಣಗೋಡೆ ಕುಸಿದು ಎರಡು ಮನೆಗಳಿಗೆ ಹಾನಿಯಾಗುವ ಸಂಭವಿದೆ, ಅಲ್ಲಿನ ಪರಿಸ್ಥಿತಿಯನ್ನು ಶಾಸಕರು ಬೇಟಿ ನೀಡಿ ಅವಲೋಕನ ನಡೆಸಿದರು.
ಪ್ರಾಥಮಿಕ ಹಂತದಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು, ಮತ್ತು ಸಮಸ್ಯೆಯಿಂದ ಸಿಲುಕಿಕೊಂಡ ಮನೆಗಳಿಗೆ ತಾತ್ಕಾಲಿಕವಾಗಿ ಪರಿಹಾರ ಕಾರ್ಯಕೈಗೊಂಡು ಸರಕಾರದಿಂದ ಸಿಗುವ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ದೇವದಾಸ್ ಶೆಟ್ಟಿ, ರಾಮ್ ದಾಸ್ ಬಂಟ್ವಾಳ, ಪುರಸಭಾ ಸದಸ್ಯ ಗಂಗಾಧರ ಪೂಜಾರಿ, ಪುರುಷೋತ್ತಮ ಶೆಟ್ಟಿ, ದಿನೇಶ್ ಶೆಟ್ಟಿ ದಂಬೆದಾರ್ ಮತ್ತಿತರರು ಹಾಜರಿದ್ದರು.
ನಿನ್ನೆಯಿಂದ ಸುರಿದ ನಿರಂತರ ಮಳೆಗೆ ಬಂಟ್ವಾಳ ಪುರಸಭೆಯ ಬಂಟ್ವಾಳ ಕಸ್ಬಾ ಗ್ರಾಮದ ದೈವಗುಡ್ಡೆ ಎಂಬಲ್ಲಿ ರವಿ ಆಚಾರ್ಯ ಎಂಬವರ ಮನೆಯ ಆವರಣ ಗೋಡೆ ಬೇಬಿ ಎಂಬವರ ಮನೆಯ ಮೇಲೆ ಕುಸಿದು ಬಿದ್ದು ಅಪಾರ ಹಾನಿ ಸಂಭವಿಸಿದೆ.
ನಿನ್ನೆಯಿಂದ ಸುರಿದ ನಿರಂತರ ಮಳೆಗೆ ಬಂಟ್ವಾಳ ಪುರಸಭೆಯ ಬಂಟ್ವಾಳ ಕಸ್ಬಾ ಗ್ರಾಮದ ಹೊಸಮಾರು ಎಂಬಲ್ಲಿ ಗಣೇಶ್ ಪೂಜಾರಿಯವರ ಮನೆಯ ಆವರಣ ಗೋಡೆ ಹೊಸಮಾರು ಸಂಪರ್ಕ ರಸ್ತೆಗೆ ಕುಸಿದು ಬಿದ್ದಿದೆ.