ಬಂಟ್ವಾಳ: ಯಾವುದೇ ರೋಗಗಳಿರಲಿ ಅವುಗಳು ಬಂದಾಗ ನಿವಾರಿಸಿಕೊಳ್ಳುವುದಕ್ಕಿಂತ ಬರದಂತೆ ಜಾಗೃತಿ ವಹಿಸುವುದು ಅತ್ಯಂತ ಅವಶ್ಯಕವಾದುದು. ಇಂದು ಏಡ್ಸ್ನಂತಹ ರೋಗಗಳು ಹೆಚ್ಚು ಹರಡುತ್ತಿರುವುದು ಸ್ವಯಂಕೃತ ತಪ್ಪುಗಳಿಂದಲೇ ಹೆಚ್ಚು. ನಗರ ಪ್ರದೇಶದ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನತೆ ಮಾದಕವಸ್ತುಗಳಿಗೆ ಆಕರ್ಷಿತರಾಗುವುದು ಹೆಚ್ಚಾಗುತ್ತಿದ್ದು ಇದು ಏಡ್ಸ್ ಹರಡಲು ಪ್ರಮುಖ ಕಾರಣಗಳಲ್ಲೊಂದು ಎಂದು ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಜಯರಾಮ್ ಪೂಜಾರಿ ನುಡಿದರು.  ಇದನ್ನೂ ಓದಿ : ಅಂಗನವಾಡಿ ನೇಮಕಾತಿ 2026: 10th, 12th ಪಾಸಾದವರಿಗೆ 946 ಸರ್ಕಾರಿ ಹುದ್ದೆಗಳು! | Tumkur Anganwadi Recruitment 2026 
ಅವರು ಶ್ರೀ ವೆಂಕಟರಮಣಸ್ವಾಮಿ ಕಾಲೇಜಿನ ಎನ್.ಎಸ್.ಎಸ್. ಹಾಗೂ ರೆಡ್ ರಿಬ್ಬನ್ ಕ್ಲಬ್ ಘಟಕಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ಜಾಗೃತಿ ದಿನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಓದಿನೊಂದಿಗೆ ಇಂತಹ ಜಾಗೃತಿಕಾರ್ಯಕ್ರಮಗಳಿಂದ ಪಡೆದ ಪ್ರಯೋಜನವನ್ನು ಸಮಾಜದ ಇತರರಿಗೂ ತಿಳಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ  ಎಂ.ಡಿ.ಮAಚಿ ತಿಳಿಸಿದರು. ವೇದಿಕೆಯಲ್ಲಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುದರ್ಶನ್ ಬಿ. ಉಪಸ್ಥಿತರಿದ್ದರು.
ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಡಾ.ಕಾಶೀನಾಥ ಶಾಸ್ತಿç ಹೆಚ್.ವಿ. ಸ್ವಾಗತಿಸಿ, ಆರ್.ಆರ್.ಸಿ. ಸಂಯೋಜಕರಾದ ಸುಪ್ರೀತ್ ಕಡಕೋಳ್ ವಂದಿಸಿದರು. ಶ್ರೀಮತಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ಏಡ್ಸ್ ಜಾಗೃತಿ ಕುರಿತಾದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು.