ಬಂಟ್ವಾಳ: ಇಂದಿನ ವಿದ್ಯಾರ್ಥಿಗಳು ಹೊರಗಿನ ಸಮಾಜದೊಂದಿಗೆ ಬೆರೆತಾಗ ಮಾತ್ರಜ್ಞಾನ ವಿಸ್ತಾರವಾಗುವುದು. ಪೋಷಕರು ಶಿಕ್ಷಕರ ನಡುವೆ ಪರಸ್ಪರ ಸಮನ್ವಯತೆಇದ್ದಲ್ಲಿ ಮಾತ್ರವಿದ್ಯಾರ್ಥಿಗಳ ಪ್ರಗತಿಗೆ ಸಹಕಾರವಾಗುವುದು.ಕೇವಲ ವೈದ್ಯ, ಇಂಜಿನಿಯರ್ ಹುದ್ದೆಗಳಷ್ಟೇ ಉದ್ಯೋಗಗಳಲ್ಲ ಅದರ ಹೊರತಾಗಿಯೂ ದೇಶಸೇವೆ ಮಾಡುವ ಹಲವಾರು ಅವಕಾಶಗಳಿವೆ ಎಂದು ಎನ್.ಸಿ.ಸಿ.ಮಂಗಳೂರು ವಲಯದ ಲೆಫ್ಟಿನಂಟ್‌ ಕಮಾಂಡಿಗ್‌ ಆಫೀಸರ್ ಶ್ರೀ ಗ್ರೇಸಿಯನ್ ಸಿಕ್ವೇರಿಯಾ ನುಡಿದರು.

ಅವರು ಬಂಟ್ವಾಳದ ವಿದ್ಯಾಗಿರಿಯಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟನರಿ ಶಾಲೆಯ ವಾರ್ಷಿಕೋತ್ಸವಕಾರ್ಯಕ್ರಮದ ಮುಖ್ಯಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಶ್ರೀ ವೆಂಕಟರಮಣ ಸ್ವಾಮೀ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ಶ್ರೀಮತಿ ರೇಖಾ ಕೆ ಶೆಣೈಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಶ್ರೀ ವೆಂಕಟರಮಣಸ್ವಾಮಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುದರ್ಶನ್ ಬಿರವರು ಮಾತನಾಡಿ ವಿದ್ಯಾರ್ಥಿಗಳ ಪ್ರಗತಿಅವರ ಪ್ರತಿಭೆಯಲ್ಲಿದೆ. ಆದಕಾರಣಎಲ್ಲಾ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಬಿ.ಆರ್.ಎಮ್.ಪಿ.ಸಿ.ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಜೂಲಿ ಟಿ.ಜೆ. ಶಾಲಾ ವಾರ್ಷಿಕ ವರದಿ ವಾಚಿಸಿದರು. ಬಿ.ಆರ್.ಎಮ್.ಪಿ.ಸಿ.ಶಾಲೆಯ ಉಪ ಪ್ರಾಂಶುಪಾಲರಾದ ಶ್ರೀಮತಿ ಪೂರ್ಣೇಶ್ವರಿ ಭಟ್ ಸ್ವಾಗತಿಸಿ, ಶ್ರೀಮತಿ ಅನಿತಡಿಸೋಜಾ ವಂದಿಸಿದರು. ಪ್ರಾರ್ಥನಾ ಎಸ್‌. ರಾವ್ ಮತ್ತು ತಂಡದವರು ಪ್ರಾರ್ಥಿಸಿದರು. ಶ್ರೀಮತಿ ನಮಿತಾಂಜಲಿ ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ ಸುರೇಖಾ ರೈ ಬಹುಮಾನ ವಿತರಣಾ ಕಾರ್ಯಕ್ರಮ ನೆರವೇರಿಸಿಕೊಟ್ಟರು.