ಬಂಟ್ವಾಳ: ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಶಂಭೂರು ಇಲ್ಲಿ 2025-26ನೇ ಸಾಲಿನ ಬಾಳ್ತಿಲ ಕ್ಲಸ್ಟರ್ ಮಟ್ಟದ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನಕ್ಕೆ ಸಂಬಂಧಿಸಿದ ಕಲಿಕಾ ಹಬ್ಬ ಕಾರ್ಯಕ್ರಮ ಡಿಸೆಂಬರ್ 29 ಸೋಮವಾರ ಜರಗಿತು ನಡೆಯಿತು. ಇದನ್ನೂ ಓದಿ :  ನಟಿ, ಮಾಜಿ ಸಚಿವೆ ಉಮಾಶ್ರೀ ಅವರ ಏಕಪಾತ್ರ ಅಭಿನಯದ ‘ಶಮಿಷ್ಟೇ’ ನಾಟಕ ಪ್ರದರ್ಶನಕ್ಕೆ ಚಾಲನೆ

ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.

ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಹೇಮಚಂದ್ರ ಭಂಡಾರದ ಮನೆ ವಹಿಸಿದರು.

ವೇದಿಕೆಯಲ್ಲಿ ಎಸ್.ಡಿ.ಎಂ.ಸಿ.ಉಪಾಧ್ಯಕ್ಷೆ ವಿಮಲ, ಸದಸ್ಯರಾದ ದಯಾನಂದ ,ನರಿಕೊಂಬು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಸುಜಾತ,ಕಂಟಿಕ ಶಾಲೆಯ ಚೇತನ ಕುಮಾರಿ,ನಾಯಿಲ ಶಾಲೆಯ ವಿನೋದ,ಕುದ್ರೆಬೆಟ್ಟು ಶಾಲೆಯ ವಿಶಾಲಾಕ್ಷಿ, ನಾಟಿ ಶಾಲೆಯ ಪ್ರಭಾವತಿ,ಕಂಟಕ ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಸೌಮ್ಯಶ್ರೀ, ವಿದ್ಯಾರ್ಥಿ ಪ್ರತಿನಿಧಿಗಳಾದ ಕೌಶಿಕ್ ಹಾಗೂ ಪಾವನಿ ಉಪಸ್ಥಿತರಿದ್ದರು.

ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀ ಸುಧಾಕರ ಭಟ್ ಪ್ರಸ್ತಾವನೆಗೈದರು.

ಮುಖ್ಯ ಶಿಕ್ಷಕ ಜಯರಾಮ ಪಡ್ರೆ ಸ್ವಾಗತಿಸಿ, ಶಿಕ್ಷಕಿ ಅನಿತಾ ವಂದಿಸಿದರು.. ಶಿಕ್ಷಕಿ ಜಯಂತಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಚಿತ್ರಾ,ಇಂದಿರಾ, ದಯಾವತಿ,ಮೀನಾಕ್ಷಿ, ಮಾಲಾಶ್ರೀ, ಮಂಜುಳ ಹಾಗೂ ಚಿತ್ರಾಕ್ಷಿ ಸಹಕರಿಸಿದರು. ಶಿಕ್ಷಣ ಸಂಯೋಜಕಿ ಶ್ರೀಮತಿ ಪ್ರತಿಮಾ ವೈ.ವಿ.ಭೇಟಿ ನೀಡಿ ಶುಭ ಹಾರೈಸಿದರು.