ಬಂಟ್ವಾಳ, ಫೆ. 27: ಸಮುದ್ರ ಮಟ್ಟದಿಂದ ಒಂದು ಸಹಸ್ರಕ್ಕೂ ಅಧಿಕ ಎತ್ತರದ ನರಿಕೊಂಬು ಗ್ರಾಮದ ಶ್ರೀ ಕ್ಷೇತ್ರ ಏರಮಲೆ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ಸೋಮವಾರ ನಡೆದ ವಾರ್ಷಿಕ ಉತ್ಸವದಲ್ಲಿ ಆರು ತಿಂಗಳಿಂದ 16 ವರ್ಷದ ಮಕ್ಕಳಿಗೆ ಮಾತೆಯರಿಂದ ಬಾಲಾನ್ನ ಬೋಜನ ನಡೆಯಿತು.

ನೂರಕ್ಕೂ ಅಧಿಕ ಮಾತೆಯರು, ಪುಟಾಣಿಗಳು ಭಾಗವಹಿಸಿದ್ದರು.


ತಂತ್ರಿಗಳಾದ ಕೇಶವ ಶಾಂತಿ ವೈದಿಕ ವಿಧಿ ನೆರವೇರಿಸಿದರು.

ಆಡಳಿತ ಸಮಿತಿ ಅಧ್ಯಕ್ಷ ರಾಜ್ ಬಂಟ್ವಾಳ್,  ಗೌರವ ಅಧ್ಯಕ್ಷ ರಘು ಸಪಲ್ಯ, ಪ್ರಧಾನ ಕಾರ್ಯದರ್ಶಿ ಮನೋಜ್ ಕೇದಿಗೆ, ಕೋಶಾಧಿಕಾರಿ ಕಿಶೋರ್ ಕಲ್ಯಾಣ ಅಗ್ರಹಾರ, ಸಹ ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ ಅಂತರ, ವ್ಯವಸ್ಥಾಪಕ ಸಂಜೀವ ಸಪಲ್ಯ ಮತ್ತು ಪ್ರಮುಖರು ಉಪಸ್ಥಿತರಿದ್ದರು.