ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ , ಅಮ್ಟಾಡಿ ಮಹಾಶಕ್ತಿ ಕೇಂದ್ರದ ಬಡಗಬೆಳ್ಳೂರು ಬಾಳಿಕೆ 35 ಬೂತ್ ಸಮಿತಿ ವತಿಯಿಂದ ಗುರುಪೂರ್ಣಿಮೆ ಅಂಗವಾಗಿ ಬಾಳಿಕೆ ಚಂದ್ರಶೇಕರ ರಾವ್ ಮುತ್ತೂರು ಪ್ರೌಢಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಬಳಿಕ ಸ್ವಯಂ ನಿವೃತ್ತಿ ಪಡೆದು ಪ್ರಸ್ತುತ ಕೃಷಿ ಕಾರ್ಯ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಇವರು ಬಡಗಬೆಳ್ಳೂರು ಬಿಜೆಪಿ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಬಂಟ್ವಾಳ ಬಿಜೆಪಿಯ ಕ್ಷೇತ್ರ ಸಮಿತಿಯ ಸದಸ್ಯರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಇವರಿಗೆ ಗುರುವಂದನೆ , ಗೌರವಾರ್ಪಣೆ ಕಾರ್ಯಕ್ರಮವನ್ನು ಅವರ ಮನೆಯಲ್ಲಿ ನಡೆಸಲಾಯಿತು.

ಇದನ್ನೂ ಓದಿ : ಭಾರತೀಯ ಜನತಾ ಪಾರ್ಟಿ ನರಿಕೊಂಬು ಶಕ್ತಿ ಕೇಂದ್ರ 117ನೇ ಬೂತ್ ವತಿಯಿಂದ ಗುರುವಂದನಾ ಕಾರ್ಯಕ್ರಮ

ಈ ಸಂದರ್ಭದಲ್ಲಿ ದ ಕ ಜಿಲ್ಲಾ ಬಿಜೆಪಿಕಾರ್ಯದರ್ಶಿ ದೇವಪ್ಪ ಪೂಜಾರಿ ಬೂತು ಸಮಿತಿಯ ಸದಸ್ಯರಾದ ಶ್ರೀನಿವಾಸ ಅಂಬೋಡಿಮಾರು ಆನಿಶ್ ಬಾಳಿಕೆ ನಿತ್ಯಾನಂದ ಬಾಳಿಕೆ ಆನಂದ ಬಾಳಿಕೆ ನಿಶಾಂತ್ ಬಾಳಿಕೆ ಗುರುಪ್ರಸಾದ್ ಕಾಜಿಗುಳಿ ರಕ್ಷಿತ್ ಬಾಳಿಕೆ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.