ಬಂಟ್ವಾಳ: ಆಂಬುಲೆನ್ಸ್‌ಗೆ ದಾರಿ ಬಿಡದೇ ಪುಂಡಾಟ ಮಾಡಿದ್ದ ಬೈಕ್ ಸವಾರನನ್ನು ಪೊಲೀಸರು ಅರೆಸ್ಟ್ ಮಾಡಿದ ಘಟನೆ ದಕ್ಷಿಣ ಕನ್ನಡ  ಜಿಲ್ಲೆಯ ಬಂಟ್ವಾಳ  ತಾಲೂಕಿನ ಬಿ.ಸಿ ರೋಡ್‌ನಲ್ಲಿ ನಡೆದಿದೆ.

ಬಂಧಿತ ಬೈಕ್ ಸವಾರನನ್ನು ಪುತ್ತೂರಿನ  ಬೆಟ್ಟಂಪಾಡಿ ಗ್ರಾಮದ ಮಹಮ್ಮದ್ ಮನ್ಸೂರು (38) ಎಂದು ಗುರುತಿಸಲಾಗಿದೆ.  ಇದನ್ನೂ ಓದಿ : ಕೆನಡಾ: ಭಾರತೀಯ ಮೂಲದ ಉದ್ಯಮಿಯ ಹತ್ಯೆ

ಗುರುವಾರ (ಅ.30) ಬಿಸ್ಲೆ ಘಾಟ್ ಬಳಿ ನಡೆದ ಅಪಘಾತದಲ್ಲಿ ಗಾಯಾಗೊಂಡಿದ್ದವರನ್ನು ಆಂಬುಲೆನ್ಸ್‌ನಲ್ಲಿ ಕರೆದೊಯ್ಯುತ್ತಿದ್ದರು. ಈ ವೇಳೆ ಬಿ.ಸಿ.ರೋಡ್ ಬಳಿ ಬೈಕ್ ಸವಾರನೋರ್ವ ಮೂರ್ನಾಲ್ಕು ಕಿ.ಮೀವರೆಗೆ ಆಂಬುಲೆನ್ಸ್‌ಗೆ ದಾರಿ ಬಿಡದೇ ಪುಂಡಾಟ ಮಾಡಿದ್ದ. ಈ ವಿಡಿಯೋವನ್ನು ಆಂಬುಲೆನ್ಸ್ ಸಿಬ್ಬಂದಿ ವೈರಲ್ ಮಾಡಿದ್ದ. ಇದನ್ನೂ ಓದಿ :  ಪುರಸಭಾ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ