ಬಂಟ್ವಾಳ, ಜು.23: ಬಿ. ಸಿ. ರೋಡ್ ರಂಗೋಲಿ ಸಭಾಂಗಣದಲ್ಲಿ ಜು. 23 ರಂದು ನಡೆದ ಅಡಿಕೆ ಕೃಷಿ ಎಲೆಚುಕ್ಕಿ ರೋಗ ಮಾಹಿತಿ ನಿಯಂತ್ರಣ ಕಾರ್ಯಾಗಾರವನ್ನು ಭೂಬ್ಯಾಂಕ್ ಮಾಜಿ ಅಧ್ಯಕ್ಷ ಸುದರ್ಶನ ಜೈನ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಭೂಬ್ಯಾಂಕ್ ಮಾಜಿ ಅಧ್ಯಕ್ಷ ಸುದರ್ಶನ ಜೈನ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಕರ್ನಾಟಕ ತೆಂಗು ಉತ್ಪಾದಕರ ಸೌಹಾರ್ಧ ಸಹಕಾರಿ ಮತ್ತು ತೋಟಗಾರಿಕಾ ಇಲಾಖೆ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆದಿತ್ತು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಜಗನ್ನಾಥ ಚೌಟ ಬದಿಗುಡ್ಡೆ, ದೇವಪ್ಪ ಕುಲಾಲ್ ಪಂಜಿಕಲ್ಲು, ತೆಂಗು ಸೌಹಾರ್ಧ ಸಹಕಾರಿ ಅಧ್ಯಕ್ಷ ರಾಜ್ ಬಂಟ್ವಾಳ್, ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್. ರೊಡ್ರಿಗಸ್ , ಮಂಗಳೂರು ಕೆವಿಕೆ ವಿಜ್ಞಾನಿ ಡಾ. ಕೇದಾರನಾಥ್, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜೊ ಪ್ರದೀಪ್ ಡಿಸೋಜ, ಸಹಕಾರಿ ನಿರ್ದೇಶಕರಾದ ಪ್ರೇಮನಾಥ ಶೆಟ್ಟಿ, ಕೃಷ್ಣಪ್ಪ ಸಪಲ್ಯ ಅಂತರ, ಉಪನ್ಯಾಸಕ ಜಯಾನಂದ ಪೆರಾಜೆ, ಸಿಇಒ ಹರ್ಷಿತ್ ಕುಮಾರ್ ಉಪಸ್ಥಿತರಿದ್ದರು.
ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಇಲಾಖೆಯಿಂದ ಕೀಟನಾಶಕ ಸಿಂಪರಣೆ ಆಗಬೇಕು ಎಂದು ಪಿಯೂಸ್ ಎಲ್ ರೊಡ್ರಿಗಸ್ ಸಲಹೆ ನೀಡಿದರು.
ಸಿಯಾಳ ನೆರೆ ರಾಜ್ಯ ತಮಿಳುನಾಡಿನಿಂದ ಬರುತ್ತಿದೆ. ಅದರ ಬದಲು ಸ್ಥಳೀಯ ತೆಂಗು ಬೆಳೆಗಾರರ ತೋಟದ ಸಿಯಾಳ ಮಾರಾಟಕ್ಕೆ ವ್ಯವಸ್ಥೆ ಆಗಬೇಕು ಎಂದು ಅಭಿಪ್ರಾಯಪಟ್ಟರು.
ತೋಟಗಾರಿಕಾ ಇಲಾಖೆಯ ವಿವಿಧ ಯೋಜನೆ ಸವಲತ್ತುಗಳ ಬಗ್ಗೆ ಪ್ರದೀಪ್ ಡಿಸೋಜ ತಿಳಿಸಿದರು.
ವಿಜ್ಞಾನಿ ಡಾ. ಕೇದಾರನಾಥ್ ಮಾತನಾಡಿ ಅಡಿಕೆ ಬೆಳೆಯಲ್ಲಿ ಎಲೆಚುಕ್ಕಿ ರೋಗವನ್ನು ಆರಂಭದಲ್ಲಿ ಗಮನಿಸಿ ನಿಯಂತ್ರಣಕ್ಕೆ ತನ್ನಿ, ಗಂಭೀರ ಸ್ವರೂಪಕ್ಕೆ ಬಂದಾಗ ರೈತರಿಗೆ ದೊಡ್ಡ ನಷ್ಟ ಸಂಭವಿಸುತ್ತದೆ ಎಂದರು.
ಕೃಷ್ಣಪ್ಪ ಅಂತರ ಸ್ವಾಗತಿಸಿ , ಜಯಾನಂದ ಪೆರಾಜೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.